ಉಡುಪಿ : ಪೆರಂಪಳ್ಳಿಯಲ್ಲಿ ರೈತ ದಿನಾಚರಣೆ
ಉಡುಪಿ, ಡಿ.25: ಜಿಲ್ಲಾ ಕೃಷಿಕ ಸಂಘ ಪೆರಂಪಳ್ಳಿ ವಲಯ ಸಮಿತಿ, ಉಡುಪಿ ರೋಟರಿ ಮತ್ತು ರೋಟರಿ ಸಮುದಾಯ ದಳಗಳ ವತಿಯಿಂದ ರೈತರ ದಿನಾಚರಣೆಯನ್ನು ಪೆರಂಪಳ್ಳಿಯಲ್ಲಿ ವಿಶೇಷವಾಗಿ ಆಚರಿಸಲಾಯಿತು.
ಗ್ರಾಮದ ಹಿರಿಯ ಅನ್ನದಾತರಿಗೆ ಮೊದಲ ಗೌರವ ನೀಡುವ ಹಿಂದಿನ ಪರಂಪರೆಯಂತೆ ಪೆರಂಪಳ್ಳಿ, ಶೀಂಬ್ರ ಪರಿಸರದ ಕೃಷಿಯಲ್ಲಿ ವಿಶೇಷ ಅನುಭವಿ ರೈತರ ಮನೆಗಳಿಗೇ ತೆರಳಿ ಶಾಲು ಹೊದಿಸಿ, ನೆನಪಿನ ಕಾಣಿಕೆ, ಸನ್ಮಾನ ಪತ್ರ ಗೌರವ ಅರ್ಪಿಸಲಾಯಿತು.
ಲಿಲ್ಲಿ ಮಸ್ಕರೇನಸ್ ಶೀಂಬ್ರ, ಶಕುಂತಳಾ ಬಂಗೇರ ಆಚಾರಿಬೆಟ್ಟು, ಲಾರೆನ್ಸ್ ಡಿಸೋಜಾ ಕಲ್ಲುಗುಡ್ಡೆ, ಕೃಷ್ಣಪ್ಪ ಸುವರ್ಣ ಎಲೆಬೈಲು, ಮರಿಯನ್ ಡಿಸೋಜಾ ಅಂಬಡೆಬೆಟ್ಟು, ಶಂಕರ ಕೋಟ್ಯಾನ್ ಶೀಂಬ್ರ, ಆಗಸ್ಟಿನ್ ಡಿಸೋಜಾ ಶೀಂಬ್ರ, ಪೆಡ್ರಿಕ್ ಜೋಸೆಫ್ ಡಿಸೋಜ ಬೊಬ್ಬರ್ಯಕಟ್ಟೆ ಮತ್ತು ಶಂಕರ ಸುವರ್ಣ ಪೆರಂಪಳ್ಳಿ ರೈತ ದಿನಾಚರಣೆಯಲ್ಲಿ ಸನ್ಮಾನಿತರಾದ ಒಂಭತ್ತು ಮಂದಿ ಕೃಷಿಕರು.
ನಂತರ ಕೃಷಿಕರೊಬ್ಬರ ಮನೆಯಲ್ಲಿ ಜಿಲ್ಲಾ ಕೃಷಿಕ ಸಂಘದ ಅಧ್ಯಕ್ಷ ರಾಮಕೃಷ್ಣ ಶರ್ಮ ಬಂಟಕಲ್ಲು ಅಧ್ಯಕ್ಷತೆಯಲ್ಲಿ ನಡೆದ ಸರಳ ಸಮಾರಂಭವನ್ನು ಉಡುಪಿ ರೋಟರಿ ಅಧ್ಯಕ್ಷ ರಾಮಚಂದ್ರ ಉಪಾಧ್ಯಾಯ ಉದ್ಘಾಟಿಸಿದರು.
ರೋಟರಿ ದಳದ ಸುಬ್ರಹ್ಮಣ್ಯ ಕಾರಂತ್, ಅನಂತರಾಮ್ ಬಲ್ಲಾಳ್, ಉದ್ಯಮಿ ಆಗ್ನೇಲ್ ಡಿಸೋಜಾ, ಹಿರಿಯ ಕೃಷಿಕ ತಜ್ಞ ಅಂತಪ್ಪ ಪೂಜಾರಿ, ಪೀಟರ್ ಡಿಸೋಜ, ಜೋಸೆಪ್ ಮಸ್ಕರೇನಸ್, ಕೃಷ್ಣಪ್ಪ ಮೂಲ್ಯ, ರಮೇಶ್ ಮರಕಾಲ, ಬಾಬಣ್ಣ ಪುತ್ತೂರು, ಲುವೀಸ್ ಡಿಸೋಜ ಮೊದಲಾದವರು ಉಪಸ್ಥಿತರಿದ್ದರು.
ಕೃಷಿಕ ಸಂಘ ಪೆರಂಪಳ್ಳಿ ವಲಯದ ಅಧ್ಯಕ್ಷ ಸುಬ್ರಹ್ಮಣ್ಯ ಶ್ರೀಯಾನ್ ಸ್ವಾಗತಿಸಿದರು. ರೋಟರಿ ದಳದ ಶ್ರೀನಿವಾಸ ಬಲ್ಲಾಳ್ ಮಲ್ಲಂಪಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶೀಂಬ್ರ ರವೀಂದ್ರ ಪೂಜಾರಿ ವಂದಿಸಿ ರವೀಂದ್ರ ಗುಜ್ಜರಬೆಟ್ಟು ಕಾರ್ಯಕ್ರಮ ನಿರ್ವಹಿಸಿದರು.







