ಬಂಡೀಪುರ : 8 ವರ್ಷದ ಹೆಣ್ಣು ಹುಲಿ ಸಾವು

ಗುಂಡ್ಲುಪೇಟೆ,ಡಿ.25: ಬಂಡೀಪುರ ರಾಷ್ಟ್ರೀಯ ಉದ್ಯಾನದ ಮೂಲೆಹೊಳೆ ವಲಯದಲ್ಲಿ 8 ವರ್ಷ ವಯಸ್ಸಿನ ಹೆಣ್ಣುಹುಲಿಯ ಕಳೇಬರ ಭಾಗಶಃ ಕೊಳೆತ ಸ್ಥಿತಿಯಲ್ಲಿ ಕಂಡುಬಂದಿದೆ.
ಪಶುವೈದ್ಯ ಡಾ.ನಾಗರಾಜು ಅವರು ಕಳೇಬರದ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಸುಟ್ಟುಹಾಕಲಾಯಿತು. ಕಾದಾಟದಲ್ಲಿ ತೀವ್ರಗಾಯಗೊಂಡ ಹುಲಿಯ ಕಾಲುಗಳು ಹಾಗೂ ಮೈಮೇಲೆ ಗಂಭೀರ ಗಾಯಗಳಾಗಿದ್ದರಿಂದ ಮೂರು ದಿನಗಳ ಹಿಂದೆಯೇ ಸಾವಿಗೀಡಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.
ಈ ಸಂದರ್ಭದಲ್ಲಿ ಸಿಎಫ್ ಅಂಬಾಡಿಮಾಧವ್, ಆರ್ ಎಫ್ ಓ ಗಳಾದ ಸುನಿಲ್ ಕುಮಾರ್, ಶೈಲೇಂದ್ರಕುಮಾರ್, ಹಿಮಗಿರಿ ವನ್ಯಜೀವಿ ಹಿತರಕ್ಷಣಾ ಸಂಸ್ಥೆಯ ಸಂಯೋಜಕ ರಘುರಾಂ ಹಾಗೂ ಸಿಬ್ಬಂದಿಗಳು ಹಾಜರಿದ್ದರು.
Next Story





