ಕ್ರಿಸ್ಮಸ್ ಹಬ್ಬದ ಶುಭಾಶಯ ಕೋರಿದ ಸೋಶಿಯಲ್ ಅಚೀವ್ ಮೆಂಟ್ ಫಾರಂ ಮಂಗಳೂರು

ಮಂಗಳೂರು,ಡಿ.25:ಸೋಶಿಯಲ್ ಅಚೀವ್ ಮೆಂಟ್ ಫಾರಂ ಮಂಗಳೂರು ಇದರ ಸದಸ್ಯರು ಮಂಗಳೂರು ನಗರ ವೆಲೆನ್ಸಿಯಾದಲ್ಲಿರುವ St.Antony's poor home ಎಂಬ ಕ್ರಿಸ್ಚಿಯನ್ ಸಂಸ್ಥೆಗೆ ಭೇಟಿ ಕೊಟ್ಟು ಕ್ರಿಸ್ಮಸ್ ಹಬ್ಬದ ಶುಭಾಶಯ ಕೋರಿದರು.
ಸೋಶಿಯಲ್ ಎಚೀವ್ ಮೆಂಟಿನ ಸದಸ್ಯರನ್ನು ಬರಮಾಡಿಕೊಂಡ ಸಂಸ್ಥೆಯ ಫಾದರ್ ಫ್ರಾನ್ಸಿಸ್ ಡಿಸೋಜರವರು ಸೋಶಿಯಲ್ ಎಚೀವ್ಮೆಂಟ್ ಫಾರಂ ಸದಸ್ಯರ ಕಾರ್ಯವನ್ನು ಶ್ಲಾಘಿಸಿದರು.
ಹಬ್ಬ ಹರಿದಿನಗಳಲ್ಲಿ ಬೇರೆಬೇರೆ ಧರ್ಮದವರು ಪರಸ್ಪರ ಶುಭಾಶಯ ಕೋರುವಿಕೆ ಸಿಹಿತಿಂಡಿ ವಿತರಣೆ ಊಟೋಪಚಾರ ಮೊದಲಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು ಮತ್ತು ಆ ಮೂಲಕ ಧರ್ಮ ಧರ್ಮಗಳೆಡೆಯಲ್ಲಿ ನಂಬಿಕೆ ಪ್ರೀತಿ ವಿಶ್ವಾಸ ಸಹೋದರತೆ ಸೌಹಾರ್ದತೆ ಕಡಿಮೆಯಾಗದಂತೆಯೂ, ಈ ಎಲ್ಲಾ ಸಾಮಾಜಿಕ ಮೌಲ್ಯಗಳು ಎಂದೂ ನೆಲಗೊಳ್ಳುವಂತೆಯೂ ಮಾಡಬೇಕಾದ್ದು ಹಿಂದಿನ ಕಾಲಕ್ಕಿಂಯಲೂ ಇಂದಿನ ದಿನಗಳಲ್ಲಿ ಬಹಳ ಅವಶ್ಯವಿದೆಯೆಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಸೋಶಿಯಲ್ ಎಚೀವ್ಮೆಂಟ್ ಫಾರಂ ನ ಅಧ್ಯಕ್ಷ ನಾಸಿರ್ ಸಾಮಣಿಗೆ ಸಂಚಾಲಕರಾದ ನಿಯಾಝ್ ಸಾಮಣಿಗೆ ಹಾಗೂ ಅಬ್ದುಲ್ ಬಶೀರ್ ಕಲ್ಕಟ್ಟ ಕಾನೂನು ಸಲಹೆಗಾರರಾದ ಅಡ್ವೊಕೇಟ್ ಫೈಝಲ್ ಪ್ರ.ಕಾರ್ಯದರ್ಶಿ ಇಬ್ರಾಹಿಂ ಖಲೀಲ್ ಸಂಘಟನಾ ಕಾರ್ಯದರ್ಶಿ ಅಬ್ದುಲ್ ಖಾದರ್ ಅಡ್ಕರೆ ಉದ್ಯಮಿ ಅಜೀಂ ಕಂಕನಾಡಿ ಮುಸ್ತಪಾ ಪಟ್ಲ ಕಲ್ಲಾಪು ಅಬ್ದುಲ್ ರಶೀದ್ ಮಂಜನಾಡಿ ಹಾಜರಿದ್ದರು.





