ಮಲಯಾಳಂ ನಟ ಫಹದ್ ಫಾಝಿಲ್ ಬಂಧನ, ಬಿಡುಗಡೆ

ತಿರುವನಂತಪುರ, ಡಿ. 25: ನಕಲಿ ದಾಖಲೆಗಳನ್ನು ಬಳಸಿ ಪುದುಚೇರಿಯಲ್ಲಿ ಲಕ್ಸುರಿ ವಾಹನ ನೋಂದಣಿ ಮಾಡಿರುವುದಕ್ಕೆ ಸಂಬಂಧಿಸಿ ಮಲಯಾಳಂ ನಟ ಫಹದ್ ಫಾಝಿಲ್ ಅವರನ್ನು ಸೋಮವಾರ ಇಲ್ಲಿಂದ ಬಂಧಿಸಿ ಬಳಿಕ ಬಿಡುಗಡೆಗೊಳಿಸಲಾಯಿತು.
ವಿಚಾರಣೆಗೆ ತನಿಖಾ ಅಧಿಕಾರಿಗಳ ಮುಂದೆ ಹಾಜರಾಗಿದ್ದ ಪ್ರಶಸ್ತಿ ವಿಜೇತ ನಟನ ಹೇಳಿಕೆಯನ್ನು ಕೇರಳ ಪೊಲೀಸ್‌ನ ಕ್ರೈಮ್ ಬ್ರಾಂಚ್ ದಾಖಲಿಸಿಕೊಂಡಿತು ಎಂದು ಮೂಲಗಳು ತಿಳಿಸಿವೆ.
ಅನಂತರ ನಟನನ್ನು 50 ಸಾವಿರ ರೂ ದಂಡ ಹಾಗೂ ಇಬ್ಬರ ಶ್ಯೂರಿಟಿ ಮೇಲೆ ಬಿಡುಗಡೆಗೊಳಿಸಲಾಯಿತು ಎಂದು ಕ್ರೈಮ್ ಬ್ರಾಂಚ್ ಅಧಿಕಾರಿ ತಿಳಿಸಿದ್ದಾರೆ. ಕಳೆದ ವಾರ ಆಲಪ್ಪುಳ ನ್ಯಾಯಾಲಯದಿಂದ ಫಹದ್ ನಿರೀಕ್ಷಣಾ ಜಾಮೀನು ಪಡೆದಿದ್ದರು.
Next Story





