ಎಸ್ಸೆಸ್ಸೆಫ್ ಬಜ್ಪೆ ಸೆಕ್ಟರ್ ಪ್ರತಿಭೋತ್ಸವ

ಬಜ್ಪೆ,ಡಿ.25: ಎಸ್ಸೆಸ್ಸೆಫ್ ಬಜ್ಪೆ ಸೆಕ್ಟರ್ ಪ್ರತಿಭೋತ್ಸವವು ಡಿ.24 ರಂದು ರವಿವಾರ ಬಜ್ಪೆ ಅನ್ಸಾರ್ ಕ್ಯಾಂಪಸ್ ನಲ್ಲಿ ನಡೆಯಿತು.
ಎಸ್‌ವೈಎಸ್ ಬಜ್ಪೆ ಸೆಂಟರ್ ಅಧ್ಯಕ್ಷ ಹಾಜಿ ಮುಹಮ್ಮದ್ ಹನೀಫ್ ಬಜ್ಪೆ ಅಧ್ಯಕ್ಷತೆ ವಹಿಸಿದ್ದರು. ಬಜ್ಪೆ ಎಂಜೆಎಂ ಮುದರ್ರಿಸ್ ಅಬ್ದುಲ್ಲಾ ಅಹ್ಸನಿ ದುಆ ನೆರವೇರಿಸಿದರು. ಮರ್ಕಝ್ ಕೈಕಂಬ ಇದರ ಚೇರ್‌ಮೆನ್ ಬದ್ರುದ್ದೀನ್ ಅಝ್‌ಹರಿ ಅಲ್ ಕಾಮಿಲ್ ಉದ್ಘಾಟಿಸಿದರು. ಇಶಾರ ಪಾಕ್ಷಿಕ ಸಂಪಾದಕ, ಪತ್ರಕರ್ತ ಹಮೀದ್ ಬಜ್ಪೆ ದಿಕ್ಸೂಚಿ ಭಾಷಣ ಮಾಡಿದರು. ಎಸ್ಸೆಸ್ಸೆಫ್ ಮೂಡಬಿದ್ರೆ ಡಿವಿಶನ್ ಅಧ್ಯಕ್ಷ ಹಾಫಿಳ್ ಅಬ್ದುಲ್ ಮಜೀದ್ ಫಾಳಿಲಿ ಅಲ್ ಕಾಮಿಲ್ ಸಂದರ್ಶನ ನಡೆಸಿದರು.
ಬಜ್ಪೆ ಎಂಜೆಎಂ ಅಧ್ಯಕ್ಷ ಹಾಜಿ ಇಸ್ಮಾಯಿಲ್ ಜಾವಳೆ ಮತ್ತು ಎಂಜೆಎಂ ಇಸ್ಲಾಮಿಕ್ ಸ್ಟಡಿ ಸೆಂಟರ್ ಅಧ್ಯಕ್ಷ ಬದ್ರುದ್ದೀನ್ ಹಾಜಿ ಜರಿನಗರ ಶುಭಹಾರೈಸಿದರು. ಬೆಳಿಗ್ಗೆಯಿಂದ ಸಂಜೆಯ ತನಕ ನಡೆದ ವಿವಿಧ ಸ್ಪರ್ಧೆಗಳಲ್ಲಿ ಬಜ್ಪೆ ಸೆಕ್ಟರ್ ವ್ಯಾಪ್ತಿಯ ಬಜ್ಪೆ, ಕೆ.ಪಿ ನಗರ, ಜರಿ ನಗರ, ಸೌಹಾರ್ದ ನಗರ, ಪಡೀಲ್ ಮತ್ತು ತಾರಿಕಂಬಳ ಶಾಖೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಬಜ್ಪೆ ಶಾಖೆಯು ಅತ್ಯಧಿಕ ಅಂಕಗಳೊಂದಿಗೆ ಚಾಂಪಿಯನ್ ಪಟ್ಟವನ್ನು ಪಡೆಯಿತು, ಕೆಪಿ ನಗರ ಶಾಖೆಯು ದ್ವಿತೀಯ ಸ್ಥಾನ ತನ್ನದಾಗಿಸಿಕೊಂಡಿತು.
ವೇದಿಕೆಯಲ್ಲಿ ಎಸ್‌ವೈಎಸ್ ಜಿಲ್ಲಾ ಕಾರ್ಯದರ್ಶಿ ಸಲೀಲ್ ಹಾಜಿ ಬಜ್ಪೆ, ಕರ್ನಾಟಕ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ನಿರ್ದೇಶಕ ಶಾಹುಲ್ ಹಮೀದ್ ಬಜ್ಪೆ, ದ.ಕ ಜಿಲ್ಲಾ ವಖ್ಫ್ ಸಲಹಾ ಸಮಿತಿಯ ನೂತನ ಸದಸ್ಯ ಅಬ್ದುಲ್ ಖಾದರ್ ಜರಿನಗರ, ಎಸ್‌ವೈಎಸ್ ಬಜ್ಪೆ ಸೆಂಟರ್ ಮುಖಂಡರಾದ ಅಹ್ಮದ್ ಹುಸೈನ್ ಶಾಫಿ ಬಜ್ಪೆ, ಬಶೀರ್ ಅಲ್ ರಫಾ ಬಜ್ಪೆ, ಎಂಎಚ್ ಹನೀಫ್ ಕೆ.ಪಿ ನಗರ, ಉಸ್ಮಾನ್ ಕೆ.ಪಿ ನಗರ, ಸುಲೈಮಾನ್ ಕೆ.ಪಿ ನಗರ, ಹನೀಫ್ ಅಮ್ಮುಂಜೆ ಕೆಪಿ ನಗರ, ಕೆಸಿಎಫ್‌ನ ಮುಸ್ತಫಾ ಬಜ್ಪೆ ಮುಂತಾದವರು ಉಪಸ್ಥಿತರಿದ್ದರು. ಎಸ್ಸೆಸ್ಸೆಫ್ ಬಜ್ಪೆ ಸೆಕ್ಟರ್ ಅಧ್ಯಕ್ಷ ಶಾಕಿರ್ ಎಮ್ಮೆಸ್ಸಿ ಸ್ವಾಗತಿಸಿದರು, ಕಾರ್ಯದರ್ಶಿ ಸಿದ್ದೀಖ್ ಬಜ್ಪೆ ನಿರೂಪಣೆ ಮಾಡಿದರು, ಕೋಶಾಧಿಕಾರಿ ರಮೀಝ್ ತಾರಿಕಂಬಳ ವಂದಿಸಿದರು.







