ಜಮೀಯ್ಯತುಲ್ ಫಲಾಹ್ ದ.ಕ ಮತ್ತು ಉಡುಪಿ ಉಭಯ ಜಿಲ್ಲಾಧ್ಯಕ್ಷರಾಗಿ ಶಾಹುಲ್ ಹಮೀದ್ ಕೆ.ಕೆ ಪುನರಾಯ್ಕೆ

ಮಂಗಳೂರು,ಡಿ.25:ಜಮೀಯ್ಯತುಲ್ ಫಲಾಹ್ ದ.ಕ ಮತ್ತು ಉಡುಪಿ ಇದರ ವಾರ್ಷಿಕ ಮಹಾಸಭೆಯು ಜಮೀಯ್ಯತುಲ್ ಫಲಾಹ್ ಸಮುದಾಯ ಭವನದಲ್ಲಿ ಅಧ್ಯಕ್ಷರಾದ ಶಾಹುಲ್ ಹಮೀದ್ ಕೆ.ಕೆ ಇವರ ಅಧ್ಯಕ್ಷತೆಯಲ್ಲಿ ಜರಗಿತು. ಉಭಯ ಜಿಲ್ಲೆಗಳ 150 ಸದಸ್ಯರು ಹಾಗೂ ಎನ್.ಆರ್.ಸಿ.ಸಿ ಸದಸ್ಯರು ಹಾಜರಿದ್ದರು.
ವಾರ್ಷಿಕ ವರದಿ ಮತ್ತು ವಾರ್ಷಿಕ ಲೆಕ್ಕಪತ್ರ ಮಂಡಿಸಿ ಅನುಮೋದನೆ ಪಡೆಯಲಾಯಿತು. ನೂತನವಾಗಿ ರಚನೆಗೊಂಡ ಬೈಂದೂರು, ಕಾಪು, ಬ್ರಹ್ಮಾವರ ಘಟಕಗಳಿಗೆ ಅನುಮೋದನೆ ನೀಡಲಾಯಿತು. 2017-19 ನೇ ಸಾಲಿನ ಆಡಳಿತ ಮಂಡಳಿಯ ಚುನಾವಣೆ ನಡೆದು ಅಧ್ಯಕ್ಷರಾಗಿ ದ.ಕ.ಜಿ.ಪಂ ಶಿಕ್ಷಣ ಮತ್ತು ಆರೋಗ್ಯ ಸ್ಥಾಯೀ ಸಮಿತಿ ಅಧ್ಯಕ್ಷರಾದ ಶಾಹುಲ್ ಹಮೀದ್ ಕೆ.ಕೆ ಪುನರಾಯ್ಕೆಗೊಂಡರು. ಪ್ರಧಾನ ಕಾರ್ಯದರ್ಶಿಯಾಗಿ ಸಲೀಂ ಹಂಡೇಲ್, ಕೋಶಾಧಿಕಾರಿಯಾಗಿ ಹಾಜಿ ಇಬ್ರಾಹೀಂ ಕೋಡಿಜಾಲ್, ಉಪಾಧ್ಯಕ್ಷರಾಗಿ ಶೇಖ್ ಅಬೂಮುಹಮ್ಮದ್ ಕುಂದಾಪುರ ಇವರು ಆಯ್ಕೆಯಾದರು.
ಜೊತೆ ಕಾರ್ಯದರ್ಶಿಯಾಗಿ ಶೇಖ್ ಜೈನುದ್ದೀನ್ ಪುತ್ತೂರು, ಪತ್ರಿಕಾ ಕಾರ್ಯದರ್ಶಿಯಾಗಿ ಸುಲೈಮಾನ್ ಬಜಗೋಳಿ ಮತ್ತು ಸಂಘಟನಾ ಕಾರ್ಯದರ್ಶಿಯಾಗಿ ಆಲಿಯಬ್ಬ ಬೆಳ್ತಂಗಡಿ ಇವರು ಅವಿರೋಧವಾಗಿ ಆಯ್ಕೆಯಾದರು. ಚುನಾವಣಾಧಿಕಾರಿಗಳಾಗಿ ನಿವೃತ್ತ ಡಿ.ಎಫ್.ಒ ಮುಹಮ್ಮದ್ ಮತ್ತು ಸಂಸ್ಥೆಯ ಮಾಜಿ ಅಧ್ಯಕ್ಷರಾದ ಅಝೀಂ ಎಂ.ಎಂ ಕಾರ್ಯನಿರ್ವಹಿಸಿದರು.





