ಹನೂರು: ಅಲುಗುಮೂಲೆ ಗ್ರಾಮದಲ್ಲಿ ದೇವಸ್ಥಾನಗಳಿಗೆ ದೇಣಿಗೆ ನೀಡುವ ಕಾರ್ಯಕ್ರಮ

ಹನೂರು, ಡಿ. 25: ಸಂಸ್ಕೃತಿಯ ಪ್ರತೇಕ ದೇವಸ್ಥಾನಗಳನ್ನು ನಿರ್ಮೀಸುವುದರ ಮೂಲಕ ನಮ್ಮ ಹಳ್ಳಿಗರ ಸಂಸ್ಕೃತಿಯನ್ನು ಕಾಪಾಡುವುದು ನಮ್ಮ ಪೌಂಡೇಷನ್ ಗುರಿಗಳಲ್ಲಿ ಇದು ಸಹ ಒಂದಾಗಿದೆ ಎಂದು ರಾಜೇಂದ್ರಕುಮಾರ್ ಪೌಂಡೇಷನ್ ಸಂಸ್ಥಾಪಕ ಮತ್ತು ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಸಿ.ಎಂ.ರಾಜೇಂದ್ರಕುಮಾರ್ ತಿಳಿಸಿದರು
ಹನೂರು ಸಮೀಪದ ನಾಗನತ್ತ ಮತ್ತು ಅಲುಗುಮೂಲೆ ಗ್ರಾಮದಲ್ಲಿ ದೇವಸ್ಥಾನಗಳಿಗೆ ದೇಣಿಗೆ ನೀಡುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಈ ಎರಡು ಗ್ರಾಮಗಳಲ್ಲೂ ಸಹ ಎರಡು ದೇವಸ್ಥಾನಗಳ ಅಭಿವೃದ್ದಿಗೆ ತಲಾ ಒಂದು ಲಕ್ಷ ದೇಣಿಗೆ ನೀಡಲಾಗಿದ್ದು . ಅದ್ದಲ್ಲದೆ ಮುಂದಿನ ದಿನಗಳಲ್ಲಿ ಕ್ಷೇತ್ರ ವ್ಯಾಪ್ತಿಯಲ್ಲಿ ಹಲವು ಶಾಲೆಗಳು ಶಿಥಲಾವ್ಯವಸ್ಥೆಗೆ ಬಂದಿರುತ್ತವೆ. ಅಂತಹ ಶಾಲೆಗಳನ್ನು ಗುರುತಿಸಿ ದುರಸ್ಥಿ ಕಾರ್ಯವನ್ನು ನಮ್ಮ ಪೌಂಡೇಷನ್ ಮುಖಾಂತರ ಮಾಡುತ್ತವೆ . ಇಂತಹ ಕಾರ್ಯದಿಂದ ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ಕೂಡಲು ಸಹಕಾರಿಯಾಗುತ್ತದೆ ಎಂದು ರಾಜೇಂದ್ರಕುಮಾರ್ ಪೌಂಡೇಷನ್ ಸಂಸ್ಥಾಪಕ ಮತ್ತು ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಸಿ.ಎಂ.ರಾಜೇಂದ್ರಕುಮಾರ್ ತಿಳಿಸಿದರು
ಇದೇ ಸಂದರ್ಭದಲ್ಲಿ ತಾಲ್ಲೂಕು ಪಂಚಾಯತಿ ಸದಸ್ಯರಾದ ಕೃಷ್ಣ , ಪಾಳ್ಯ ಜಯಸುಂದರನಾಯಕ ,ಮುಖಂಡರಾದ ಮಹದೇವಪ್ಪ , ಬಂಡಳ್ಳಿ ಶಂಕರಪ್ಪ, ಮಲ್ಲಪ್ಪ , ಗುರುಮಲಗಲಪ್ಪ, ಬಿಜೆಪಿ ಯುವಮೋರ್ಚಾ ಅದ್ಯಕ್ಷರಾ ವೃಷ್ಪೇಂದ್ರಸ್ವಾಮಿ ಪದಾದಿಕಾರಿಗಳಾದ ಮೂರ್ತಿ(ಮಾತೃಭೂಮಿ) ನಾಗೇಂದ್ರ ,ರಂಗಧಾಮಚಾರಿ , ಪುರೋಷತಮ್ , ಮುರುಗೇಶ್, ಸಚನ್‍ದಿಕ್ಷಿತ್,ಗೌಡ್ರುಸ್ವಾಮಿ ಇನ್ನಿತರರು ಹಾಜರಿದ್ದರು.





