ಈಜಿಪ್ಟ್: ಕೆಫೆ ಮೇಲೆ ಗುಂಡಿನ ದಾಳಿ; 3 ಸಾವು
ಕೈರೋ (ಈಜಿಪ್ಟ್), ಡಿ. 25: ಈಜಿಪ್ಟ್ ರಾಜಧಾನಿಗೆ ಸಮೀಪದ ಕೆಫೆಯೊಂದರ ಮೇಲೆ ಗುಂಡು ಹಾರಿಸಿದ ಮುಸುಕುಧಾರಿ ಬಂದೂಕುಧಾರಿಗಳು ಮೂವರನ್ನು ಕೊಂದಿದ್ದಾರೆ ಎಂದು ಪೊಲೀಸರು ರವಿವಾರ ತಿಳಿಸಿದ್ದಾರೆ.
ಕೈರೋದಿಂದ ಸುಮಾರು 50 ಕಿ.ಮೀ. ದೂರದಲ್ಲಿರುವ ಅಲ್-ಅಯತ್ ಗ್ರಾಮದಲ್ಲಿ ಈ ದಾಳಿ ನಡೆದಿದೆ. ಈ ಘಟನೆಯಲ್ಲಿ ಕನಿಷ್ಠ ಐವರು ಗಾಯಗೊಂಡಿದ್ದಾರೆ.
ಇದು ಭಯೋತ್ಪಾದನಾ ಕೃತ್ಯವಾಗಿರದೆ, ಕ್ರಿಮಿನಲ್ ಕೃತ್ಯವಾಗಿರುವ ಸಾಧ್ಯತೆಯಿದೆ ಎಂದು ಪೊಲೀಸರು ಅಂದಾಜಿಸಿದ್ದಾರೆ.
Next Story