ಶಾಂತಿ ಸಮಾಧಾನದಿಂದ ನೆಮ್ಮದಿ ಸಾಧ್ಯ: ರೆ.ಫಾ.ಅಬ್ರಾಹಂ

ರಿಪ್ಪನ್‌ಪೇಟೆ, ಡಿ.25: ಇಂದಿನ ಆಧುನಿಕ ಜಗತ್ತಿನಲ್ಲಿ ಪ್ರತಿಯೊಬ್ಬರು ಒತ್ತಡದ ಜೀವನದಿಂದ ಬದುಕುತ್ತಿದ್ದಾರೆ ಇದನ್ನು ೋಗಲಾಡಿಸಲು ಶಾಂತಿ ಮತ್ತು ನೆಮ್ಮದಿಯ ಜೀವನ ಅಗತ್ಯವಾಗಿದೆ ಎಂದು ಪಟ್ಟಣದ ಗುಡ್ ಶಫರ್ಡ್ ದೇವಾಲಯದ ಧರ್ಮಗುರು ರೆ.ಫಾ.ಅಬ್ರಾಹಂ ಅಭಿ್ರಾಯಿಸಿದ್ದಾರೆ.
ಪಟ್ಟಣದ ಗುಡ್‌ಶಫರ್ಡ್ ದೇವಾಲಯದಲ್ಲಿ ರವಿವಾರ ತಡರಾತ್ರಿ ಕ್ರಿಸ್‌ಮಸ್ ಹಬ್ಬದ ಪ್ರಯುಕ್ತ ಆಯೋಜಿಸಲಾಗಿದ್ದ ವಿಶೇಷ ಪೂಜೆಯಲ್ಲಿ ಭಾಗವಹಿಸಿ ಆಶೀರ್ವಚನ ನೀಡಿದ ಅವರು ಯೇಸು ಕ್ರಿಸ್ತರು ಜಗತ್ತಿಗೆ ನೀಡಿದ ಮಹಾನ್ ಸಂದೇಶವೆಂದರೆ ಶಾಂತಿ ನೆಮ್ಮದಿಯಿಂದ ಬಾಳಿರಿ ಇದರಿಂದ ಬದುಕು ಸಾರ್ಧಕವಾಗುತ್ತದೆ. ಕ್ರೈಸ್ತರು ಜಾತಿ ಮತ ಪಂಥಗಳ ಭೇದವನ್ನು ಮರೆತು ಸದ್ಭಾನೆಯಿಂದ ಎಲ್ಲರಲು ಬೆರೆತು ದೇಶ ಸೇವೆ ಮತ್ತು ಸಮಾಜದ ಅಭಿವೃದ್ಧ್ದಿಯಲ್ಲಿ ತೊಡಗಿಕೊಳ್ಳಬೇಕು ಆಗ ಮಾತ್ರ ಯೇಸು ಕ್ರಿಸ್ತರ ಸಂದೇಶಗಳಿಗೆ ಅರ್ಥ ಸಿಕ್ಕಿದಂತಾಗುತ್ತದೆ ಆ ನಿಟ್ಟಿನಲ್ಲಿ ಪ್ರತಿಯೊಬ್ಬ ಕ್ರೈಸ್ತರು ಮುಂದಾಗಬೇಕು ಆಗ ಮಾತ್ರ ನೆಮ್ಮದಿಯ ಜೀವನ ನಡೆಸಲು ಸಾಧ್ಯವಾಗುತ್ತದೆ ಎಂದರು.
ನೂರಾರು ಸಂಖ್ಯೆಯಲ್ಲಿ ಕ್ರೈಸ್ತರು ಕ್ರಿಸ್‌ಮಸ್ ಆಚರಣೆಯ ಲ್ಲಿ ಭಾಗವಹಿಸಿ ಹಬ್ಬದ ಶುಭಾಶಯವನ್ನು ಪರಸ್ಪರ ಕೋರಿ ಕ್ರಿಸ್‌ಮಸ್ ಕೇಕ್ ಹಂಚಿ ಸಂಭ್ರಮಿಸಿದರು.





