ಮಹಿಳೆಗೆ ವಂಚನೆ: ದೂರು ದಾಖಲು
ಕಾರ್ಕಳ, ಡಿ.26: ಮ್ಯಾಕ್ಸ್ ಲೈಫ್ ಇನ್ಸೂರೆನ್ಸ್ ಕಂಪನಿಯ ಪ್ರತಿನಿಧಿ ಎಂದು ಹೇಳಿ ಕರೆ ಮಾಡಿದ ಅಪರಿಚಿತ ವ್ಯಕ್ತಿಯೊಬ್ಬರು ಮಹಿಳೆಯಿಂದ ವಾರ್ಷಿಕ ಪಾಲಿಸಿ ಹಣವನ್ನು ಖಾತೆಗೆ ಜಮೆ ಮಾಡುವಂತೆ ಮಾಡಿ ವಂಚಿಸಿರುವ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸೆ. 16ರಂದು ಕಾರ್ಕಳ ಗಾಂಧಿ ಮೈದಾನ ಬಳಿಯ ನಿವಾಸಿ ಸಲೀಮುಲ್ಲ ಖಾನ್ ಎಂಬವರ ಪತ್ನಿ ಶಮೀಮ್ ಬಾನು (50) ಎಂಬವರ ಮೊಬೈಲ್‌ಗೆ ಮ್ಯಾಕ್ಸ್ ಲೈಫ್ ಇನ್ಸೂರೆನ್ಸ್ ಕಂಪನಿಯವರೆಂದು ಹೇಳಿ ಕರೆ ಮಾಡಿ, ಗಂಡನ ಪಾಲಿಸಿಯ ವಾರ್ಷಿಕ ಕಂತು ಕಟ್ಟಲು ಈ ದಿನವೇ ಕೊನೆಯ ದಿನ ಎಂದು ತಿಳಿಸಿದ್ದನು. ಅದಕ್ಕೆ ಅವರು ಕೂಡಲೇ ಪಾಲಿಸಿಯ ವಾರ್ಷಿಕ ಕಂತು 70,000 ರೂ.ವನ್ನು ನೆಫ್ಟ್ ಮೂಲಕ ಪಾವತಿಸಿದರು. ಬಳಿಕ ಅವರಿಗೆ ವಂಚನೆಯಾಗಿ ರುವುದು ತಿಳಿದುಬಂತು ಎಂದು ದೂರಿನಲ್ಲಿ ತಿಳಿಸಲಾಗಿದೆ.
Next Story





