ಹೊಸದಿಲ್ಲಿಯಲ್ಲಿ ಆವರಿಸಿದ ಹೊಗೆ; 10 ರೈಲುಗಳ ಸಂಚಾರ ರದ್ದು

ಹೊಸದಿಲ್ಲಿ, ಡಿ. 26: ಉತ್ತರ ಭಾರತದ ವಿವಿಧ ಭಾಗಗಳಲ್ಲಿ ಹೊಗೆ ಆವರಿಸಿಕೊಂಡಿರುವುದರಿಂದ ಕನಿಷ್ಠ 10 ರೈಲುಗಳನ್ನು ರದ್ದುಗೊಳಿಸಲಾಗಿದೆ ಹಾಗೂ ಆರು ರೈಲುಗಳ ಸಂಚಾರ 30 ನಿಮಿಷ ವಿಳಂಬವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಂಗಳವಾರ 7.1 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ. ಇದು ಈ ಋತುಮಾನದ ಸರಾಸರಿ ಉಷ್ಣಾಂಶಕ್ಕಿಂತ ಕಡಿಮೆ ಇದೆ. ಅಲ್ಲದೆ ವಾತಾವರಣ ತೀವ್ರ ಚಳಿ ಹಾಗೂ ಹೊಗೆಯಿಂದ ಕೂಡಿದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಬೆಳಗ್ಗೆ 8:30ರ ಹೊತ್ತಿಗೆ ವಾತಾವರಣದ ಆರ್ದ್ರತೆ ಶೇ. 94 ಇತ್ತು. 300 ಮೀಟರ್ ದೂರದ ವರೆಗೆ ಮಾತ್ರ ಕಾಣುತ್ತಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Next Story





