ಚಿಕ್ಕಮಗಳೂರು: ಪಟ ಚಿತ್ರಗಳ ಕಲಾ ಪ್ರದರ್ಶನ

ಚಿಕ್ಕಮಗಳೂರು, ಡಿ.26: ಶಾಂತಿನಿಕೇತನ ಆರ್ಟ್ ಫೌಂಡೇಶನ್ ಸಹಕಾರದೊಂದಿಗೆ ಶಾಂತಿನಿಕೇತನ ಚಿತ್ರಕಲಾ ಮಹಾವಿದ್ಯಾಲಯ ದಲ್ಲಿ ಪಟಚಿತ್ರ ಕಾರ್ಯಾಗಾರವನ್ನು ಕಲಾವಿದೆ ಶಿಲ್ಪಾವಿಶ್ವಕರ್ಮರ ಮಾರ್ಗದರ್ಶನದಲ್ಲಿ ಆಯೋಜಿಸಲಾಗಿತ್ತು.
ಈ ಸಾಂಪ್ರದಾಯಿಕ ಪಟಚಿತ್ರ ರಚನಾ ಕಾರ್ಯಗಾರದಲ್ಲಿ ರಚಿತವಾದ 21 ವಿಶಿಷ್ಟವಾದ ಕಲಾಕೃತಿಗಳನ್ನು ಶಾಂತಿನಿಕೇತನ ಚಿತ್ರಕಲಾ ಗ್ಯಾಲರಿಯಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ. ಈ ವಿಶೇಷವಾದ ಕಲಾಪ್ರಕಾರವನ್ನು ಪಟ ಚಿತ್ರ ಎಂದು ಕರೆಯಲಾಗುತ್ತದೆ. ಪಟ ಎಂಬುದು ಬಟ್ಟೆಯ ಮೇಲೆ ಮೂಡಲ್ಪಡುವ ಒಂದು ಸಾಂಪ್ರದಾಯಿಕ ಕಲೆೆ. ಭಾರತದ ಪೂರ್ವ ರಾಜ್ಯ ಒರಿಸ್ಸಾದಲ್ಲಿ ಕೇಂದ್ರೀಕೃತವಾಗಿದೆ. ಈ ಕಲೆಯ ಇತಿಹಾಸ ಕ್ರಿ. ಪೂ. 5ನೇ ಶತಮಾನಕ್ಕೆ ಕರೆದೊಯ್ಯುತ್ತದೆ. ಮತ್ತು ಈ ಕಲಾ ಪ್ರಕಾರದ ಉತ್ತಮ ಕಲಾಕೃತಿಗಳು ಪುರಿ, ಕೊನಾರ್ಕ್ ಮತ್ತು ಭುವನೇಶ್ವರ ಭಾಗದಲ್ಲಿ ಕಾಣಸಿಗುತ್ತವೆ. ಈ ಪುರಾತನ ಕಲೆಯು ಈಗಲೂ ಕೂಡ ಪುರಿ, ರಘುರಾಜ್‌ಪುರ್, ಸೋನೇಪುರ್ ಮುಂತಾದೆಡೆ ಪ್ರಚಲಿತದಲ್ಲಿದೆ.
Next Story





