ಬಂದೂಕು ತೋರಿಸಿ ಬಾಲಕಿಯ ಅತ್ಯಾಚಾರ

ಹೊಸದಿಲ್ಲಿ, ಡಿ. 26: ಇಲ್ಲಿನ ನಾಗ್ಲಾ ಬಜುರ್ಗಾ ಗ್ರಾಮದಲ್ಲಿ 15 ವರ್ಷದ ಬಾಲಕಿಗೆ ಬಂದೂಕು ತೋರಿಸಿ ಇಬ್ಬರು ಯುವಕರು ಅತ್ಯಾಚಾರ ಎಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಇಬ್ಬರು ಯುವಕರು ಬಾಲಕಿಯ ಮನೆ ಪ್ರವೇಶಿಸಿ ಆಕೆಯನ್ನು ಬಲವಂತವಾಗಿ ಟೆರೇಸ್‌ಗೆ ಕೊಂಡೊಯ್ದು ಅತ್ಯಾಚಾರ ನಡೆಸಿದ್ದಾರೆ. ಈ ಘಟನೆ ನಡೆಯುವಾಗ ಕುಟುಂಬದ ಇತರ ಸದಸ್ಯರು ಇನ್ನೊಂದು ಕೊಠಡಿಯಲ್ಲಿ ನಿದ್ರೆಯಲ್ಲಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಸಂತ್ರಸ್ತೆಯ ತಂದೆ ನೀಡಿದ ದೂರಿನಂತೆ ಪೊಲೀಸರು ಕಾರ್ಯಪ್ರವೃತ್ತರಾಗಿದ್ದಾರೆ.
Next Story





