ಆಟೊ ಚಾಲಕರಿಗೆ ನಿವೇಶನ ನೀಡಲು ಅಗತ್ಯ ಕ್ರಮ: ಶಾಸಕ ದತ್ತ

ಕಡೂರು, ಡಿ.26: ಶೀಘ್ರದಲ್ಲಿಯೇ ಆಟೊ ಚಾಲಕರಿಗೆ ನಿವೇಶನ ನೀಡಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಶಾಸಕ ವೈ.ಎಸ್.ವಿ.ದತ್ತ ಭರವಸೆ ನೀಡಿದ್ದಾರೆ.
ಅವರು ಕಡೂರು ಪಟ್ಟಣದ ಕೆಎರ್ಸ್ಸಾಟಿಸಿ ಬಸ್ ನಿಲ್ದಾಣದ ಮುಂಭಾಗದಲ್ಲಿ ಶಾಸಕರ ಅನುದಾನದ 5 ಲಕ್ಷ ರೂ.ವೆಚ್ಚದ ಹಾಗೂ ಕೆ.ಎಂ. ರಸ್ತೆಯಲ್ಲಿ 3 ಲಕ್ಷ ರೂ.ವೆಚ್ಚದಲ್ಲಿ ನಿಮಾಣವಾಗಿರುವ ನೂತ ಆಟೋ ನಿಲ್ದಾಣ ಉಧ್ಘಾಟಿಸಿ ಮಾತನಾಡಿದರು. ಆಟೋ ಚಾಲಕರ ಹಾಗು ನನ್ನ ನಡುವಿನ ಸಂಭಂದ ದಶಕಗಳಷ್ಟು ಹಳೆಯದಾಗಿದೆ. ಅಂತಹ ವರ್ಗದ ಮದ್ಯೆ ಇರುವ ತಾವು ಬಡ ಆಟೋ ಆಟೋ ಚಾಲಕರಿಗೆ ಸೂರು ಕೊಡಿಸಬೇಕು ಎಂಬ ತಮ್ಮ ಕನಸು ನನಸು ಮಾಡುವ ನಿಟ್ಟಿನಲ್ಲಿ ಪ್ರಯತ್ನ ಸಾಗಿದೆ ಎಂದರು.
ಮಾಜಿ ಪುರಸಭಾಧ್ಯಕ್ಷ ಭಂಡಾರಿ ಶ್ರೀನಿವಾಸ್ ಮಾತನಾಡಿ, ಚಾಲಕರಿಗೆ ಉಚಿತ ನಿವೇಶನ ನೀಡುವ ಸಲುವಾಗಿ ಈಗಾಗಲೇ ಶಾಸಕರೊಂದಿಗೆ ಚರ್ಚಿಸಿ ಖಾಸಗಿ ಜಮೀನು ಖರೀದಿ ಮಾಡಲು ನಿವೇಶನ ಹಂಚಿಕೆಗೆ ಪ್ರಯತ್ನ ಸಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಎಪಿಎಂಸಿ ನಿರ್ದೇಶಕ ಕೆ.ಎಚ್.ಲಕ್ಕಣ್ಣ, ನಮ್ಮ ಕರವೇ ಸಂಘದ ತಾಲೂಕು ಅಧ್ಯಕ್ಷ ಆಟೊ ಅಣ್ಣಪ್ಪ, ಆಟೋ ಸಂಘದ ಅಧ್ಯಕ್ಷ ರಂಗನಾಥ್, ಮುಖಂಡರಾದ ಸೀಗೇಹ ಡ್ಲುಹರೀಶ್, ವೆಂಕಟೇಶ್, ವಿನಯ ದಂಡಾವತಿ ಉಪಸ್ಥಿತರಿದ್ದರು.





