ಮಹಿಳೆಯರ ಮೇಲೆ ದೌರ್ಜನ್ಯ: ರಮಾಕುಮಾರಿ ವಿಷಾದ

ತುಮಕೂರು.ಡಿ.26: ಮಹಿಳೆಯರ ಮೇಲೆ ಪ್ರತೀ ನಿತ್ಯ ಮಾನಸಿಕ ಹಾಗೂ ದೈಹಿಕ ದೌರ್ಜನ್ಯ ನಡೆಯುತ್ತಿದೆ ಎಂದು ಜಿಲ್ಲಾ ಕಸಾಪ ಅಧ್ಯಕ್ಷೆ ಬಾ.ಹ. ರಮಾಕುಮಾರಿ ವಿಷಾದಿಸಿದ್ದಾರೆ.
ನಗರದ ಡಾ.ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು, ಚಿಕ್ಕಮಗಳೂರಿನ ಅಭಿನಯ ದರ್ಪಣ ಯುವ ವೇದಿಕೆ ಹಾಗೂ ತುಮಕೂರಿನ ಸಮ್ಮತ ಥಿಯೇಟರ್ ವತಿಯಿಂದ ಮಹಿಳಾ ಮತ್ತು ಮಕ್ಕಳ ಮೇಲಿನ ದೌರ್ಜನ್ಯದ ವಿರುದ್ಧ ಅರಿವು ಮೂಡಿಸುವ ‘ಪೂರ್ವಿ ಕಲ್ಯಾಣಿ’ ನಾಟಕ ಉದ್ಘಾಟಿಸಿ ಮಾತನಾಡುತಿದ್ದ ಅವರು, ಪ್ರತೀ ನಿತ್ಯ ಮಾಧ್ಯಮಗಳ ಮೂಲಕ ಹೆಣ್ಣಿನ ಮೇಲೆ ನಡೆಯುತ್ತಿರುವ ದೌರ್ಜನ್ಯ ಪ್ರಕರಣಗಳನ್ನು ನೋಡುತ್ತಲೇ ಇದ್ದೇವೆ. ಸ್ತ್ರೀ ಸಮಾನತೆ ಬಗ್ಗೆ ಮಾತನಾಡುತ್ತಿರುವ ಹೊತ್ತಲ್ಲೇ ದೌರ್ಜನ್ಯ ಪ್ರಕರಣಗಳು ನಡೆಯುತ್ತಿರುವುದು ವಿಷಾದ. ಪೂರ್ವಿ ಕಲ್ಯಾಣಿ ನಾಟಕದ ಮೂಲಕ ಮಹಿಳೆಯರು ಮತ್ತು ಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯದ ವಿರುದ್ಧ ಅರಿವು ಮೂಡಿಸುವ ಪ್ರಯತ್ನವಾಗಲಿ ಎಂದು ಆಶಿಸಿದರು.ಕಾರ್ಯಕ್ರಮದಲ್ಲಿ ಪತ್ರಕರ್ತ ಉಗಮ ಶ್ರೀನಿವಾಸ್, ನಿರ್ದೇಶಕಿ ಪದ್ಮಾ ಕೊಡಗು ಮತ್ತಿತರರು ಉಪಸ್ಥಿತರಿದ್ದರು.





