ಹಫೀಝ್ ಸ್ಥಾನಕ್ಕೆ ಮಲಿಕ್
ಕರಾಚಿ, ಡಿ. 26: ಕಳೆದ ಮೂರು ವರ್ಷಗಳ ಅವಧಿಯಲ್ಲಿ ಸಂಶಯಾಸ್ಪದ ಬೌಲಿಂಗ್ ಕಾರಣಕ್ಕಾಗಿ 3ನೇ ಬಾರಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಸಂಸ್ಥೆ(ಐಸಿಸಿ)ಯಿಂದ ಅಮಾನತುಗೊಂಡಿರುವ ಮುಹಮ್ಮದ್ ಹಫೀಝ್ ಬದಲಿಗೆ ಶುಐಬ್ ಮಲಿಕ್ ಮುಂಬರುವ ನ್ಯೂಝಿಲೆಂಡ್ ವಿರುದ್ಧದ ಸೀಮಿತ ಓವರ್‌ಗಳ ಕ್ರಿಕೆಟ್ ಸರಣಿಗೆ ತಂಡದಲ್ಲಿ ಸ್ಥಾನ ತುಂಬಲಿದ್ದಾರೆ.
ಕಳೆದ ನವೆಂಬರ್‌ನಲ್ಲಿ ಹಫೀಝ್ ಅವರ ಬೌಲಿಂಗ್ ಶೈಲಿ ಮೂರನೇ ಬಾರಿ ಕಾನೂನುಬಾಹಿರವಾಗಿ ಕಂಡು ಬಂದಿರುವ ಹಿನ್ನೆಲೆಯಲ್ಲಿ ಐಸಿಸಿ ಅಮಾನತುಗೊಳಿಸಿತ್ತು. ‘‘ಹಫೀಝ್ ಇಲ್ಲದಿರುವುದು ತಂಡಕ್ಕೆ ದೊಡ್ಡ ನಷ್ಟ. ಆದರೆ ಅವರ ಅನುಪಸ್ಥಿತಿಯಲ್ಲಿ ಆಲ್‌ರೌಂಡರ್ ಶುಐಬ್ ಮಲಿಕ್ ಮಧ್ಯಮ ಸರದಿಯಲ್ಲಿ ತಂಡವನ್ನು ಆಧರಿಸಲಿದ್ದಾರೆ’’ಎಂದು ನಾಯಕ ಸರ್ಫರಾಝ್ ಅಹ್ಮದ್ ಹೇಳಿದ್ದಾರೆ.
ತಂಡದಲ್ಲಿ ಹಾರೀಸ್ ಸೊಹೈಲ್ ಮತ್ತು ಮುಹಮ್ಮದ್ ನವಾಝ್ ಅವರಿಗೆ ಅವಕಾಶ ನೀಡುವ ಬಗ್ಗೆ ಸುಳಿವು ನೀಡಿದ್ದಾರೆ. ಪಿಚ್‌ನ್ನು ಆಧರಿಸಿ ಅಂತಿಮ ಹನ್ನೊಂದರ ತಂಡವನ್ನು ಆಯ್ಕೆ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.
ನ್ಯೂಝಿಲೆಂಡ್‌ನಲ್ಲಿ ಐದು ಪಂದ್ಯಗಳ ಏಕದಿನ ಸರಣಿ ಜ.6ರಿಂದ 19ರ ತನಕ ನಡೆಯಲಿದೆ.ಬಳಿಕ ಎರಡು ಪಂದ್ಯಗಳ ಟ್ವೆಂಟಿ-20 ಪಂದ್ಯ ನಿಗದಿಯಾಗಿದೆ.





