ಮಂಗಳೂರು: ಪತ್ರಕರ್ತರ ಮಕ್ಕಳಿಗೆ ಪ್ರತಿಭಾ ಪುರಸ್ಕರ
ಮಂಗಳೂರು, ಡಿ.27: ಮಂಗಳೂರು ಪ್ರೆಸ್‌ಕ್ಲಬ್ ದಿನಾಚರಣೆಯು 2018ರ ಜ.6ರಂದು ಬೆಳಗ್ಗೆ 10:30ಕ್ಕೆ ಉರ್ವ ಚರ್ಚ್ ಸಭಾಂಗಣದಲ್ಲಿ ನಡೆಯಲಿದೆ.
ಈ ಸಂದರ್ಭ 2016-17ನೇ ಸಾಲಿನ ಎಸೆಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಶೇ.90 ಮತ್ತು ಅದಕ್ಕಿಂತ ಅಧಿಕ ಅಂಕ ಗಳಿಸಿದ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರ ಮಕ್ಕಳನ್ನು ಗೌರವಿಸಲಾಗುವುದು.
ಅರ್ಹ ವಿದ್ಯಾರ್ಥಿಗಳ ಬಗ್ಗೆ ಅಂಕ ಪಟ್ಟಿಯ ನಕಲು ಪ್ರತಿಯ ದಾಖಲೆ ಸಹಿತ ಜ.2ರ ಸಂಜೆ 4ಗಂಟೆಯ ಒಳಗೆ ಪ್ರೆಸ್‌ಕ್ಲಬ್ಗೆ ವಿವರ ನೀಡಬಹುದು. ಮಾಹಿತಿಗೆ ಪ್ರೆಸ್‌ಕ್ಲಬ್ (ದೂ.ಸಂ: 0824-2450111) ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.
Next Story





