ಶಕ್ತಿನಗರ: ಮನೆಗೆ ನುಗ್ಗಿ ನಗದು-ಚಿನ್ನಾಭರಣ ಕಳವು
ಮಂಗಳೂರು, ಡಿ.27: ಮನೆಮಂದಿ ಸಂಬಂಧಿಕರ ಮದುವೆಗೆ ತೆರಳಿದ್ದ ಸಮಯವನ್ನು ನೋಡಿಕೊಂಡ ಕಳ್ಳರು ಮನೆಯೊಂದಕ್ಕೆ ನುಗ್ಗಿ ನಗದು ಮತ್ತು ಚಿನ್ನಾಭರಣ ಕಳವುಗೈದ ಘಟನೆ ಶಕ್ತಿನಗರ ಸಮೀಪ ಮಂಗಳವಾರ ನಡೆದಿದೆ.
ಶಕ್ತಿನಗರದ ಕಕ್ಕೆಬೆಟ್ಟು ನಿವಾಸಿ ಫಿಲೋಮಿನಾ ಡಿಸಿಲ್ವಾ ಎಂಬವರು ಮಂಗಳವಾರ ಅಪರಾಹ್ನ 3:30ಕ್ಕೆ ತನ್ನ ಮನೆಗೆ ಬೀಗ ಹಾಕಿ ಸಂಬಂಧಿಕರ ಮದುವೆ ಕಾರ್ಯಕ್ರಮಕ್ಕೆ ತೆರಳಿದ್ದರು. ರಾತ್ರಿ ಸುಮಾರು 12 ಗಂಟೆಗೆ ಆಗಮಿಸಿದಾಗ ಮನೆಯ ಮುಂಬಾಗಿಲು ಮುರಿದಿದು ಕಂಡು ಬಂತು. ಹಾಗೇ ಒಳ ಹೊಕ್ಕು ನೋಡಿದಾಗ ಮನೆಯ ಆಲ್ಮೇರಾವನ್ನು ಮುರಿದಿದ್ದ ಕಳ್ಳರು 30 ಸಾವಿರ ರೂ. ನಗದು ಮತ್ತು 7.50 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವುಗೈದಿದ್ದಾರೆ.
ಈ ಬಗ್ಗೆ ಫಿಲೋಮಿನಾ ಡಿಸಿಲ್ವಾ ನೀಡಿದ ದೂರಿನಂತೆ ಕಂಕನಾಡಿ ನಗರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Next Story





