Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಪ್ರಾಚೀನ ಇತಿಹಾಸದ ಅಧ್ಯಯನಕ್ಕೆ ಗಡಿ...

ಪ್ರಾಚೀನ ಇತಿಹಾಸದ ಅಧ್ಯಯನಕ್ಕೆ ಗಡಿ ನಿರ್ಬಂಧ ಬೇಡ: ದಿಲ್ಲಿ ವಿವಿಯ ಡಾ.ಉಪಿಂದರ್ ಸಿಂಗ್

ಮಣಿಪಾಲದಲ್ಲಿ ಪ್ರೊ.ಅಚ್ಯುತರಾವ್ ಸ್ಮಾರಕ ಇತಿಹಾಸ ಸಮ್ಮೇಳನ

ವಾರ್ತಾಭಾರತಿವಾರ್ತಾಭಾರತಿ27 Dec 2017 9:17 PM IST
share
ಪ್ರಾಚೀನ ಇತಿಹಾಸದ ಅಧ್ಯಯನಕ್ಕೆ ಗಡಿ ನಿರ್ಬಂಧ ಬೇಡ: ದಿಲ್ಲಿ ವಿವಿಯ ಡಾ.ಉಪಿಂದರ್ ಸಿಂಗ್

ಮಣಿಪಾಲ, ಡಿ.27: ಭಾರತದ ಪ್ರಾಚೀನ ಇತಿಹಾಸದ ವಿಸ್ತೃತ ಅಧ್ಯಯನ ಹಾಗೂ ತಿಳುವಳಿಕೆಯ ವಿಸ್ತರಣೆಗೆ ವಲಯ ಹಾಗೂ ಉಪಖಂಡದ ಗಡಿ ನಿರ್ಬಂಧ ತಡೆಯಾಗಿ ಪರಿಣಮಿಸುತಿದ್ದು, ಇವುಗಳನ್ನು ಮೀರಿ ಸಾಗಬೇಕಾದ ಅಗತ್ಯವಿದೆ ಎಂದು ದೇಶದ ಖ್ಯಾತನಾಮ ಇತಿಹಾಸಜ್ಞೆ, ದಿಲ್ಲಿ ವಿವಿಯ ಇತಿಹಾಸ ವಿಭಾಗದ ಪ್ರಾದ್ಯಾಪಕಿ ಹಾಗೂ ಭಾರತದ ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರ ಪುತ್ರಿ ಡಾ.ಉಪಿಂದರ್ ಸಿಂಗ್ ಹೇಳಿದ್ದಾರೆ.

ಮಾಹೆಯ ಸಹಯೋಗದೊಂದಿಗೆ ಮೈಸೂರಿನ ಡಿಎಸ್‌ಎ ಸ್ಮಾರಕ ಟ್ರಸ್ಟ್ ಇಂದು ಮಣಿಪಾಲ್ ಸೆಂಟರ್ ಪಾರ್ ಫಿಲಾಸಫಿ ಆ್ಯಂಡ್ ಹ್ಯುಮಾನಿಟೀಸ್ (ಎಂಸಿಪಿಎಚ್)ನಲ್ಲಿ ಆಯೋಜಿಸಿದ್ದ ಮೈಸೂರಿನ ಖ್ಯಾತ ಇತಿಹಾಸಜ್ಞ ಪ್ರೊ. ಅಚ್ಚುತ ರಾವ್ ಸ್ಮಾರಕ ಇತಿಹಾಸ ಸಮ್ಮೇಳನದಲ್ಲಿ ‘ಭಾರತದ ಪ್ರಾಚೀನ ಇತಿಹಾಸ ಮತ್ತು ಆಗ್ನೇಯ ಏಷ್ಯ’ ವಿಷಯದ ಕುರಿತ ಪ್ರಧಾನ ಭಾಷಣದಲ್ಲಿ ಮಾತನಾಡುತಿದ್ದರು.

ಶ್ರೀಲಂಕಾ, ಬರ್ಮಾ, ಸುಮಾತ್ರ, ಬಾಲಿ, ಚೀನ ಸೇರಿದಂತೆ ಆಗ್ನೇಯ ಏಷ್ಯ ವಲಯ ಇತಿಹಾಸದ ಅಧ್ಯಯನ, ಭಾರತದ ಪ್ರಾಚೀನ ಇತಿಹಾಸದ ಸಮಗ್ರ ಅರಿವಿನಲ್ಲಿ ಪ್ರಧಾನ ಪಾತ್ರ ವಹಿಸಿದೆ ಎಂದ ಡಾ.ಸಿಂಗ್, ಇದಕ್ಕಾಗಿ ಅವರು ಬೌದ್ಧ ಧರ್ಮ ಭಾರತದಲ್ಲಿ ವಿಕಸಿಸಿದ ರೀತಿ, ಅದು ಶ್ರೀಲಂಕಾ ಸೇರಿದಂತೆ ಏಷ್ಯ ಉಪಖಂಡದಲ್ಲಿ ಪಸರಿಸಿದ ವಿವರಗಳನ್ನು ವಿವಿಧ ದೇಶಗಳ ಇತಿಹಾಸದೊಂದಿಗೆ ತುಲನೆ ಮಾಡುತ್ತಾ ವಿವರಿಸಿದರು.

ಇವುಗಳ ಅಧ್ಯಯನ ಸಮಗ್ರವಾಗಿಲ್ಲ. ಉಪಖಂಡದ ಇತಿಹಾಸದ ಕುರಿತು ಇನ್ನೂ ಬಹಳಷ್ಟನ್ನು ನಾವು ತಿಳಿದುಕೊಳ್ಳಲು ಬಾಕಿ ಇದೆ. ಆದರೆ ಇದಕ್ಕಾಗಿ ಇತಿಹಾಸಕಾರರು ಗಡಿ ಎಂಬ ತಡೆಯನ್ನು ದಾಟಿ ಮುಂದಕ್ಕೆ ಸಾಗಬೇಕಿದೆ. ಇತಿಹಾಸರರು ಉಪಖಂಡದ ಸೀಮೆಯನ್ನು ದಾಟಿ ಸಾಗಬೇಕಾಗಿದೆ. ಇತಿಹಾಸದ ಸಮಗ್ರ ತಿಳುವಳಿಕೆಗೆ ಇದು ಅಗತ್ಯಕೂಡಾ ಆಗಿದೆ ಎಂದು ಅವರು ನುಡಿದರು.

ಭಾರತದಲ್ಲಿ ಹುಟ್ಟಿದರೂ ಬೌದ್ಧಧರ್ಮದ ಸಂವಹನ ಇಡೀ ಏಷ್ಯ ಖಂಡಕ್ಕೆ ಪಸರಿಸಿದೆ. ಇದು ದಕ್ಷಿಣ, ಆಗ್ನೇಯ ಏಷ್ಯದ ರಾಜಮನೆತನಗಳಲ್ಲಿ ಹಬ್ಬಿರುವುದು ಶಾಸನಗಳ ಮೂಲಕ, ಪುಸ್ತಕಗಳ ಮೂಲಕ ಹಬ್ಬಿದೆ. ಬೌದ್ಧ ಧರ್ಮದ ರಾಜಕೀಯ ಸಿದ್ಧಾಂತಗಳ ಪ್ರಸರಣದಲ್ಲಿ ಇದು ತುಂಬಾ ಪಾತ್ರ ವಹಿಸಿದೆ ಎಂದವರು ಉದಾಹರಣೆಗಳೊಂದಿಗೆ ವಿವರಿಸಿದರು.

ವಿಶ್ವಕ್ಕೆ ಹಬ್ಬಿದ ಪಂಚತಂತ್ರ:  ಭಾರತದಲ್ಲಿ ಸುಮಾರು ಮೂರನೇ ಶತಮಾನ ದಲ್ಲಿ ವಿಷ್ಣುಶರ್ಮ ಎಂಬಾತನಿಂದ ಬರೆಯಲ್ಪಟ್ಟ ‘ಪಂಚತಂತ್ರ’ ಕಥೆಗಳು ಇಂದು ವಿಶ್ವದಾದ್ಯಂತ ಜನಪ್ರಿಯಗೊಂಡು ಅಲ್ಲಿ ಬೇರೆ ಬೇರೆ ರೂಪಗಳಲ್ಲಿ ಈಗಲೂ ಪ್ರಸಾರದಲ್ಲಿದೆ. ಇದು ರಾಜಕೀಯ ವಿಷಯವಾಗಿದೆ. ಧರ್ಮಶಾಸ್ತ್ರ, ಅರ್ಥಶಾಸ್ತ್ರ, ಆಡಳಿತ ನಿರ್ವಹಣೆ ಎಲ್ಲವೂ ಇದರಲ್ಲಿದೆ. 8ನೇ ಶತಮಾನದಲ್ಲಿ ಅರೆಬಿಕ್ ಭಾಷೆಗೆ ಭಾಷಾಂತರಗೊಂಡ ಪಂಚತಂತ್ರ ಆ ಬಳಿಕ ವಿಶ್ವದಾದ್ಯಂತ ಜನಪ್ರಿಯಗೊಂಡಿತು.

ಪಂಚತಂತ್ರ 16ನೇ ಶತಮಾನದಲ್ಲಿ ಇಂಗ್ಲೀಷ್ ಭಾಷೆಗೂ ತುರ್ಜಮೆಗೊಂಡಿತು. ಅಲ್ಲದೇ ಇದು ಗ್ರೀಕ್, ಸ್ಪಾನಿಷ್ ಸೇರಿದಂತೆ ಇಂದು ವಿಶ್ವದ 50 ಭಾಷೆಗಳಲ್ಲಿ 200ಕ್ಕೂ ಅಧಿಕ ರೂಪಾಂತರಗಳನ್ನು ಕಂಡಿದೆ ಎಂದು ಡಾ.ಉಪಿಂದರ್ ಸಿಂಗ್ ತಿಳಿಸಿದರು.

ಪ್ರೊ.ಅಚ್ಯುತ ರಾವ್ ಅವರ ಜನ್ಮ ಶತಮಾನೋತ್ಸವದ ಅಂಗವಾಗಿ ಆಯೋಜಿಸಲಾದ ಈ ಇತಿಹಾಸ ಸಮ್ಮೇಳನವನ್ನು ಮಾಹೆಯ ಕುಲಪತಿ ಡಾ.ವಿನೋದ್ ಭಟ್ ಉದ್ಘಾಟಿಸಿದರು. ಪ್ರೊ.ಡಿ.ಎಸ್.ಅಚ್ಯುತ ರಾವ್ ಅವರ ಸಾಧನೆ ಹಾಗೂ ಜೀವನ ಕುರಿತು ಛಾಯಾಚಿತ್ರ ಪ್ರದರ್ಶನವನ್ನು ಮಣಿಪಾಲ ವಿವಿಯ ಮಾಜಿ ಕುಲಪತಿ ಡಾ.ಎಂ.ಎಸ್.ವಲಿಯಾತ್ತನ್ ಉದ್ಘಾಟಿಸಿದರು.

ಮಣಿಪಾಲ ಮಾಹೆ ಎಂಸಿಪಿಎಚ್‌ಯ ಮುಖ್ಯಸ್ಥ ಡಾ.ನಿಕಿಲ್ ಗೋವಿಂದ್ ಅತಿಥಿಗಳನ್ನು ಸ್ವಾಗತಿಸಿದರು. ಪ್ರೊ.ಅಚ್ಯುತ ರಾವ್ ಅವರ ಕುರಿತು ಡಿಎಸ್‌ಎ (ಡಿ.ಎಸ್.ಅಚ್ಯುತರಾವ್) ಸ್ಮಾರಕ ಟ್ರಸ್ಟ್‌ನ ಡಿ.ಎ.ಪ್ರಸನ್ನ ಮಾತನಾಡಿದರು. ಎಸ್.ಕಾಯ್ಕಿಣಿ ಕಾರ್ಯಕ್ರಮ ನಿರೂಪಿಸಿದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X