ಕಾಡಾನೆ ದಾಳಿ: ರೈತನಿಗೆ ಗಾಯ

ಹನೂರು, ಡಿ.27: ಜೋಳದ ಮೆದೆಗೆ ಕಾವಲಿಗೆಂದು ತೆರಳಿದ್ದ ವೇಳೆ ರೈತನ ಮೇಲೆ ಕಾಡಾನೆ ದಾಳಿ ನಡೆಸಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.
ತಾಲೂಕಿನ ಪಿ.ಜಿ.ಪಾಳ್ಯವಲಯದ ಅರಣ್ಯ ವ್ಯಾಪ್ತಿಯ ಗುರುಮಲ್ಲಪ್ಪನ ದೊಡ್ಡಿಯಲ್ಲಿ ಘಟನೆ ನಡೆದಿದೆ. ಒಡಯರಪಾಳ್ಯ ಬಳಿಯ ಕೆರೆದೊಡ್ಡಿ ಗ್ರಾಮದ ರೈತ ಕುರ್ಜ (35) ಗಾಯಳು ಎಂದು ಗುರುತಿಸಲಾಗಿದೆ. ಕಾಲು, ಎದೆ ಭಾಗಕ್ಕೆ ಸೊಂಡಲಿನಿಂದ ಕಾಡಾನೆ ದಾಳಿ ಮಾಡಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಕೊಳ್ಳೇಗಾಲ ಸರಕಾರಿ ಉಪವಿಭಾಗ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ರೈತನ ಕುಟುಂಬ ಮೂಲಗಳು ತಿಳಿಸಿವೆ.
Next Story





