ಬಿಕರ್ನಕಟ್ಟೆ: ಸ್ಕೂಟರ್ ಢಿಕ್ಕಿ; ವೃದ್ಧ ಮೃತ್ಯು

ಮಂಗಳೂರು, ಡಿ.27 : ರಸ್ತೆ ದಾಟುತ್ತಿದ್ದ ವೃದ್ಧರೋರ್ವರು ಸ್ಕೂಟರ್ ಢಿಕ್ಕಿ ಹೊಡೆದು ಮೃತಪಟ್ಟ ಘಟನ ನಗರದ ಬಿಕರ್ನಕಟ್ಟೆಯಲ್ಲಿ ಬುಧವಾರ ಮಧ್ಯಾಹ್ನ ನಡೆದಿದೆ.
ಬಿಕರ್ನಕಟ್ಟೆ ನಿವಾಸಿ ಶೇಖ್ ಹುಸೈನ್ ಸಾಹೇಬ್ (80) ಮೃತಪಟ್ಟವರು. ಮಧ್ಯಾಹ್ನ ಸುಮಾರು 1 ಗಂಟೆಯ ವೇಳೆಗೆ ಬಿಕರ್ನಕಟ್ಟೆ ಫ್ಲೈ ಒವರ್ ಸಮೀಪ ರಸ್ತೆ ದಾಟುತ್ತಿದ್ದಾಗ ಅತೀ ವೇಗದಿಂದ ಬಂದ ಸ್ಕೂಟರ್ ಢಿಕ್ಕಿ ಹೊಡೆದ ಪರಿಣಾಮ ರಸ್ತೆಗೆ ಬಿದ್ದಿದ್ದಾರೆ. ಇದರಿಂದ ಗಂಭೀರ ಗಾಯಗೊಂಡ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮಂಗಳೂರು ಸಂಚಾರ ಪೂರ್ವ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Next Story





