ಮಾಗಿ, ಕೇಕ್ ಉತ್ಸವಕ್ಕೆ ಸಚಿವ ಮಹದೇವಪ್ಪ ಚಾಲನೆ

ಮೈಸೂರು, ಡಿ.27: ಮಾಗಿ ಕೇಕ್ ಉತ್ಸವಕ್ಕೆ ಸಚಿವ ಡಾ.ಎಚ್.ಸಿ.ಮಹದೇವಪ್ಪ ನಗರದ ನಂಜರಾಜ ಬಹಾದ್ದೂರ್ ಛತ್ರದ ಆವರಣದಲ್ಲಿ ಚಾಲನೆ ನೀಡಿದರು. ಕಳೆದ ಬಾರಿಗಿಂತಲೂ ವಿಭಿನ್ನವಾಗಿ ನೋಡುಗರ ಗಮನ ಸೆಳೆದಿದ್ದ ಕೇಕ್ ಉತ್ಸವ ಈ ಬಾರಿಯೂ ಗಮನ ಸೆಳೆಯಿತು.
ಕಳೆದ ಬಾರಿ ಸ್ಪೈಡರ್‌ಮ್ಯಾನ್, ಕಾರ್ ಸೇರಿದಂತೆ ಹತ್ತಕ್ಕೂ ಹೆಚ್ಚು ವೈವಿಧ್ಯಮಯ ಕೇಕ್ ಗಳನ್ನು ಪ್ರದರ್ಶಿಸಿ ಜನರ ಗಮನ ಸೆಳೆದಿತ್ತು. ಆದರೆ ಈ ಬಾರಿ ಅಷ್ಟೊಂದು ಕೇಕ್‌ಗಳಿಲ್ಲದಿದ್ದರೂ ನೋಡುಗರಿಗಂತೂ ನಿರಾಸೆಯಿಲ್ಲ.
ಹಲವು ಕಂಪೆನಿಗಳು ತಮ್ಮ ವೈವಿಧ್ಯಮಯ ಕೇಕ್ ಹಾಗೂ ಸಿಹಿತಿನಿಸುಗಳನ್ನು ಪ್ರದರ್ಶನದ ಮೂಲಕ ಪರಿಚಯಿಸಿವೆ. 50ಕ್ಕೂ ಹೆಚ್ಚು ಬಗೆಯ ಕೇಕ್ ಉತ್ಸವದಲ್ಲಿದ್ದು ಕೆ.ಜಿ.ಗೆ 500 ರೂ.ಗಳಿಂದ 1,200 ರೂ.ವರೆಗಿನವು ಲಭ್ಯವಿದೆ.
ಈ ಸಂದರ್ಭ ಶಾಸಕ ವಾಸು, ಮೇಯರ್ ಎಂ.ಜೆ.ರವಿಕುಮಾರ್, ಮೃಗಾಲಯ ಪ್ರಾಧಿಕಾರದ ಅಧ್ಯಕ್ಷೆ ಮಲ್ಲಿಗೆ ವೀರೇಶ್ ಮತ್ತಿತರರು ಉಪಸ್ಥಿತರಿದ್ದರು.
Next Story





