ಸುಬ್ರಮಣಿಯನ್ ಸ್ವಾಮಿ ಮೆಚ್ಚಿದ ಅಂಜುಮ್ ಬಶೀರ್ ಖಾನ್
ಇವರು ಯಾರು?, ಇವರ ಸಾಧನೆಯೇನು ಗೊತ್ತೇ?

ಹೊಸದಿಲ್ಲಿ, ಡಿ.27: ಜಮ್ಮು ಕಾಶ್ಮೀರದ ಸಾರ್ವಜನಿಕ ಸೇವಾ ಆಯೋಗದ ಪರೀಕ್ಷೆಯಲ್ಲಿ ಟಾಪರ್ ಆಗಿ ಹೊರಹೊಮ್ಮಿದ್ದ ಅಂಜುಮ್ ಬಶೀರ್ ಖಾನ್ ಖಟ್ಟಕ್ ಎಲ್ಲರ ಹುಬ್ಬೇರಿಸಿದ್ದರು. ಬಶೀರ್ ಖಾನ್ ಎಲ್ಲರಿಗಿಂತ ವಿಶೇಷ ಎನಿಸುವುದೇ ಅವರ ಹಿನ್ನೆಲೆಯನ್ನು ಗಮನಿಸಿದಾಗ.
1998ರಲ್ಲಿ ಪೂಂಚ್ ಜಿಲ್ಲೆಯಲ್ಲಿರುವ ಸುರಾನ್ ಕೋಟೆಯ ಬಶೀರ್ ಖಾನ್ ರ ಮನೆಗೆ ಉಗ್ರರು ಬೆಂಕಿ ಹಚ್ಚಿದ್ದರು. ಮನೆ ಹೊತ್ತಿ ಉರಿದ ನಂತರ ಕಂಗಾಲಾದ ಬಶೀರ್ ಕುಟುಂಬ ಅಲ್ಲಿಂದ ಜಮ್ಮುವಿಗೆ ತೆರಳಿತು.
“1990ರಲ್ಲಿ ಸುರಾನ್ ಕೋಟೆಯ ಪರಿಸ್ಥಿತಿ ಹದಗೆಟ್ಟಿತ್ತು. 1998ರಲ್ಲಿ ನನ್ನ ಪೂರ್ವಜರ ಮನೆಗೆ ಉಗ್ರಗಾಮಿಗಳು ಬೆಂಕಿ ಹಚ್ಚಿದರು. “ ಎಂದು ಬಶೀರ್ ಖಾನ್ ಹೇಳುತ್ತಾರೆ.

ಈ ಘಟನೆ ಬಶೀರ್ ಕುಟುಂಬದ ಮೇಲೆ ಕೆಟ್ಟ ಪರಿಣಾಮ ಬೀರಿತು. ತಮ್ಮ ಹುಟ್ಟೂರನ್ನೂ ತೊರೆದು ಜಮ್ಮುವಿಗೆ ಸ್ಥಳಾಂತರಗೊಳ್ಳಬೇಕಾಯಿತು. “1990ರ ಸಂದರ್ಭ ಜಮ್ಮು ಹಾಗು ಕಾಶ್ಮೀರದ ಪರಿಸ್ಥಿತಿ ಕೆಟ್ಟದ್ದಾಗಿತ್ತು. ಆದರೆ ಪೀರ್ ಪಂಜಾಲ್, ರಾಜೌರಿ ಹಾಗು ಪೂಂಚ್ ನಲ್ಲಿ ಭಯೋತ್ಪಾದನಾ ಕೃತ್ಯಗಳು ಹಾಗು ಗಲಭೆಗಳು ನಡೆಯುತ್ತಿದ್ದವು. ಆ ಪ್ರದೇಶ ಅಭಿವೃದ್ಧಿ ಹೊಂದಿರಲಿಲ್ಲ ಹಾಗು ಬಂಡಾಯದ ಆತಂಕವೂ ಇತ್ತು. ಪ್ರಾಥಮಿಕ ಶಿಕ್ಷಣವನ್ನು ನಾವು ಅಲ್ಲೇ ಪಡೆದವು. ಆ ಪರಿಸ್ಥಿತಿಯಲ್ಲಿ ನಮ್ಮನ್ನು ನೋಡಿಕೊಳ್ಳುವುದು ಕಷ್ಟವೆನಿಸಿದಾಗ ಪೋಷಕರು ಜಮ್ಮುವಿಗೆ ಸ್ಥಳಾಂತರಗೊಳ್ಳಲು ನಿರ್ಧರಿಸಿದರು” ಎಂದು ಬಶೀರ್ ಖಾನ್ ಹೇಳುತ್ತಾರೆ,
8ನೆ ತರಗತಿಯಲ್ಲಿದ್ದಾಗಲೇ ತಾನು ನಾಗರಿಕ ಸೇವಾ ಆಯೋಗದ ಪರೀಕ್ಷೆ ಬರೆಯಲು ನಿರ್ಧರಿಸಿದ್ದೆ ಎಂದವರು ಹೇಳುತ್ತಾರೆ. ನಾಗರಿಕ ಸೇವಾ ಆಯೋಗದ ಪರೀಕ್ಷೆಯಲ್ಲಿ ಟಾಪರ್ ಆಗಿ ಹೊರಹೊಮ್ಮಿದ್ದ ಬಶೀರ್ ಖಾನ್ ರಿಗೆ ದೇಶಾದ್ಯಂತ ಭಾರೀ ಪ್ರಶಂಸೆ ವ್ಯಕ್ತವಾಗುತ್ತಿದೆ.
ಕಣಿವೆ ರಾಜ್ಯದಲ್ಲಿ ಶಾಂತಿ ಪ್ರಕ್ರಿಯೆಯ ಮೇಲೆ ಬಶೀರ್ ಖಾನ್ ಟಾಪರ್ ಆಗಿ ಹೊರಹೊಮ್ಮಿರುವುದು ಧನಾತ್ಮಕ ಪರಿಣಾಮ ಬೀರಲಿದೆ. ಕಣಿವೆ ರಾಜ್ಯದ ಯುವಕರು ಬಂಡಾಯದ ಹೊರತಾದ ಜೀವನವನ್ನು ಬಯಸುತ್ತಿದ್ದಾರೆ ಎಂದು ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ರಾಜ್ಯಪಾಲ ಎನ್ ಎನ್ ವೋಹ್ರಾ ಕೂಡ ಬಶೀರ್ ಖಾನ್ ರನ್ನು ಅಭಿನಂದಿಸಿದ್ದು, ಅವರ ಸಾಧನೆಯನ್ನು ಮೆಚ್ಚಿದ್ದಾರೆ.
Dr. Subramanian Swamy Speaks to NewsX on Anjum Bashir Topping the Kashmir civil service exams. @Swamy39 @jagdishshetty pic.twitter.com/3Kbsa43E4Z
— Karur.VN.Mohan (@karurvnmohan) December 20, 2017
An encouraging site. Naeem Akhtar - Minister 4 Public works visits #Kashmir Administrative Service topper Anjum Bashir Khan Khattak & second ranker, Aliya Tabassum at their residences and congratulates thm 4 cracking the state’s civil services exam. pic.twitter.com/gcxVuHtJ4k
— Tahir dhar (@tahir_dhar) December 24, 2017
Terrorist put Anjum Bashir’s House house on fire, but could not burn down his dream!
— Kashmir Pride (@kashmirPride) December 23, 2017
Anjum Bashir Khan, 27, whose home was at a remote village in Jammu and Kashmir was set on fire by terrorists 18 years ago, has topped the #Kashmir Administrative Service exams.#KashmirWantPeace pic.twitter.com/Zh1u3WHSpL
Anjum Bashir Khan whose family suffered because of #militancy, but he has excelled by #cracking the #Kashmir #Administrative #Service exams conducted by the #JammuAndKashmir Public Service Commission (JKPSC). He is the batch topper for this #year , 2017 #HappyBirthdaySalmanKhan pic.twitter.com/wlOyliMHLK
— zeenat (@zeenat_mal) December 27, 2017







