ಮಡಿಕೇರಿ :ಶ್ರದ್ಧಾಭಕ್ತಿಯಿಂದ ಜರುಗಿದ ಕಾಕೋಟು ಪರಂಬು ಜಾತ್ರೆ

ಮಡಿಕೇರಿ ಡಿ.27 :ವಿರಾಜಪೇಟೆ ಸಮೀಪದ ಇತಿಹಾಸ ಪ್ರಸಿದ್ಧ ಕಾಕೋಟುಪರಂಬು ಶ್ರೀಕಾಲಭೈರವ ಮಹೋತ್ಸವ ಶ್ರದ್ಧಾಭಕ್ತಿಯಿಂದ ಜರುಗಿತು.
ನಾಲ್ಕು ಕೇರಿಗಳ ಕುಟುಂಬದ ಸದಸ್ಯರು ಕಾಲ ಭೈರವನ ಸನ್ನಿಧಿಯಲ್ಲಿ ಸೇರಿ ಪಕ್ಕದ ಬೆಟ್ಟದ ಪರಂಬುವಿನಲ್ಲಿ ನಡೆದ ಕೊಡಗಿನ ಸಂಪ್ರದಾಯಿಕ ನೃತ್ಯವಾದ ಬೊಳಕ್ ಕೊಂಬ್ ಆಟ, ಮೆಟ್ಟುಮರಿ ಆಟ್, ಕನ್ನಡಿ ಆಟ್, ಅಂಬು ಆಟ್ ಮತ್ತು ಬಾಳೋಪಾಟ್ ಗಮನ ಸೆಳೆಯಿತು.
ಬೆಳಗ್ಗಿನಿಂದಲೇ ವಿಶೇಷ ಪೂಜೆ ನಡೆಯಿತ್ತಲ್ಲದೆ ದೇವರ ಉತ್ಸವ ಮೂರ್ತಿ ಯೊಂದಿಗೆ ಮೈದಾನದಲ್ಲಿರುವ ಹಾಲುಕಟ್ಟೆಯ ಪ್ರದಕ್ಷಿಣೆ ನಡೆಯಿತು.
ಶ್ರೀಚಾಮುಂಡಿ ತೆರೆ ಮುಖ್ಯ ಆಕರ್ಷಣೆಯಾಗಿತ್ತು, ಸಾವಿರಾರು ಸಂಖ್ಯೆಯ ಭಕ್ತರು ಪಾಲ್ಗೊಂಡಿದ್ದರು.
Next Story





