‘ಅಂಡರ್-19 ವಿಶ್ವ ಕಪ್‌ಗೆ ರಣಜಿ ಪ್ರದರ್ಶನ ನೆರವಿಗೆ ಬರಲಿದೆ’
ಭಾರತ ನಾಯಕ ಪೃಥ್ವಿ ಶಾ ವಿಶ್ವಾಸ
.jpg)
ಹೊಸದಿಲ್ಲಿ, ಡಿ.27: ನ್ಯೂಝಿಲೆಂಡ್‌ನಲ್ಲಿ ಜ.13 ರಿಂದ ಆರಂಭವಾಗಲಿರುವ ವಿಶ್ವಕಪ್‌ಗೆ ಭಾರತದ ಅಂಡರ್-19 ತಂಡ ಬುಧವಾರ ನಿರ್ಗಮಿಸಿದೆ. ಕಿರಿಯರ ವಿಶ್ವಕಪ್ ಆಡಲು ತೆರಳುವ ಮೊದಲು ನಾಯಕ ಪೃಥ್ವಿ ಶಾ ಹಾಗೂ ಕೋಚ್ ರಾಹುಲ್ ದ್ರಾವಿಡ್ ಟೂರ್ನಿಯ ತಯಾರಿ ಕುರಿತು ಮಾಧ್ಯಮ ಪ್ರತಿನಿಧಿಗಳೊಂದಿಗೆ ಸಂವಾದ ನಡೆಸಿದರು.
‘‘ವಿಶ್ವಕಪ್ ಎಲ್ಲ ಆಟಗಾರರಿಗೆ ಉತ್ತಮ ಅವಕಾಶ. ಟೂರ್ನಿಗಾಗಿ ಕಳೆದ 3 ವರ್ಷಗಳಿಂದ ತಯಾರಿ ನಡೆಸುತ್ತಿದ್ದೇವೆ. ನಾಯಕನಾಗಿ ಇಡೀ ತಂಡವನ್ನು ಜೊತೆಯಾಗಿ ಮುನ್ನಡೆಸುವೆ. ನನ್ನ ತಂಡದ ಮೇಲೆ ನಂಬಿಕೆ ಇಟ್ಟುಕೊಂಡಿದ್ದೇನೆ. ರಣಜಿ ಟ್ರೋಫಿಯಲ್ಲಿ ನಾನು ನೀಡಿರುವ ಪ್ರದರ್ಶನ ವಿಶ್ವಕಪ್‌ನಲ್ಲಿ ನೆರವಾಗುವ ವಿಶ್ವಾಸವಿದೆ’’ ಎಂದು ಶಾ ಹೇಳಿದ್ದಾರೆ.
‘‘ನಮ್ಮದು ಉತ್ತಮ ಸಮತೋಲಿತ ತಂಡ. ನಮ್ಮ ಬ್ಯಾಟಿಂಗ್ ಸರದಿ ಬಲಿಷ್ಠವಾಗಿದೆ. ಕೆಲವು ಹುಡುಗರು ರಣಜಿ ಟ್ರೋಫಿಯಲ್ಲಿ ಆಡಿದ್ದಾರೆ’’ ಎಂದು ಕೋಚ್ ದ್ರಾವಿಡ್ ಹೇಳಿದ್ದಾರೆ. ಶಾ ರಣಜಿಯಲ್ಲಿ ಮುಂಬೈ ತಂಡವನ್ನು ಪ್ರತಿನಿಧಿಸಿದ್ದು ಮೂರು ಶತಕ ಹಾಗೂ 2 ಅರ್ಧಶತಕ ಸಿಡಿಸಿದ್ದಾರೆ. ದುಲೀಪ್ ಟ್ರೋಫಿ ಫೈನಲ್‌ನಲ್ಲಿ ಇಂಡಿಯಾ ಬ್ಲೂ ಪರ ಇಂಡಿಯಾ ರೆಡ್ ವಿರುದ್ಧ 154 ರನ್ ಗಳಿಸಿದ್ದರು.
ಭಾರತ ಜ.14 ರಂದು ಆಸ್ಟ್ರೇಲಿಯ ತಂಡವನ್ನು ಎದುರಿಸುವ ಮೂಲಕ ಅಂಡರ್-19 ವಿಶ್ವಕಪ್ ಅಭಿಯಾನ ಆರಂಭಿಸಲಿದೆ. ಜ.16 ಹಾಗೂ 19 ರಂದು ಪಪುವಾ ನ್ಯೂ ಗಿನಿ ಹಾಗೂ ಝಿಂಬಾಬ್ವೆ ತಂಡವನ್ನು ಎದುರಿಸಲಿದೆ.
►ಸ್ಪರ್ಧೆ ನಡೆಯುವ ದಿನ :
2018ರ ಜ.13 ರಿಂದ ಫೆ.3ರ ತನಕ
►ಟೂರ್ನಿಯ ಮಾದರಿ: ರೌಂಡ್ ರಾಬಿನ್ ಹಾಗೂ ನಾಕೌಟ್
►ಆತಿಥೇಯ ರಾಷ್ಟ್ರ: ನ್ಯೂಝಿಲೆಂಡ್
►ಭಾಗವಹಿಸುವ ಒಟ್ಟು ತಂಡಗಳು: 16
►ಒಟ್ಟು ಪಂದ್ಯಗಳು: 48
ಹಾಲಿ ಚಾಂಪಿಯನ್: ವೆಸ್ಟ್‌ಇಂಡೀಸ್(2016ರ ವಿಶ್ವಕಪ್)
ಭಾರತದ ಪಂದ್ಯಗಳು
►ಜ.14: ಆಸ್ಟ್ರೇಲಿಯ ವಿರುದ್ಧ
►ಜ.16: ಪಪುವಾ ನ್ಯೂ ಗಿನಿ
►ಜ.19: ಝಿಂಬಾಬ್ವೆ







