Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಲಿಂಗಾಯತ ಸ್ವತಂತ್ರ ಧರ್ಮ: ಪ್ರಾಮಾಣಿಕ...

ಲಿಂಗಾಯತ ಸ್ವತಂತ್ರ ಧರ್ಮ: ಪ್ರಾಮಾಣಿಕ ಚರ್ಚೆ ನಡೆಯಲಿ

ವಾರ್ತಾಭಾರತಿವಾರ್ತಾಭಾರತಿ27 Dec 2017 11:57 PM IST
share
ಲಿಂಗಾಯತ ಸ್ವತಂತ್ರ ಧರ್ಮ: ಪ್ರಾಮಾಣಿಕ ಚರ್ಚೆ ನಡೆಯಲಿ

ತಮಗೆ ಪ್ರತ್ಯೇಕ ಧರ್ಮದ ಸ್ಥಾನಮಾನ ನೀಡಬೇಕು ಎಂಬ ಲಿಂಗಾಯತರ ಕೂಗಿಗೆ ಸರಕಾರ ಮೊದಲ ಬಾರಿಗೆ ಸ್ಪಂದಿಸಿದೆ. ಲಿಂಗಾಯತ ಧರ್ಮ ಸ್ವತಂತ್ರವೇ ಎಂಬುದನ್ನು ಪರಿಶೀಲಿಸಲು ಏಳು ಮಂದಿ ಇರುವ ಸಮಿತಿಯೊಂದನ್ನು ರೂಪಿಸಿದೆ. ಸರಕಾರದ ಈ ನಿರ್ಧಾರ ವಿವೇಕದಿಂದ ಕೂಡಿದೆ. ಒಂದಿಷ್ಟು ಗುಂಪು ಕೂಗೆಬ್ಬಿಸಿದಾಕ್ಷಣ ಒಂದು ಸಮುದಾಯವನ್ನು ಸ್ವತಂತ್ರ ಧರ್ಮ ಎಂದು ಕರೆಯಲು, ಮಾನ್ಯತೆ ಮಾಡಲು ಸಾಧ್ಯವಿಲ್ಲ. ಲಿಂಗಾಯತ ಧರ್ಮ ಹಿಂದೂ ಧರ್ಮದ ಒಂದು ಶಾಖೆ ಎನ್ನುವ ಕುರಿತಂತೆ ಸಮಾಜದಲ್ಲಿ ವ್ಯಾಪಕ ಚರ್ಚೆಗಳು ಎದ್ದಿರುವ ಸಂದರ್ಭದಲ್ಲಿ ರಾಜಕೀಯದಾಚೆಗೆ ಲಿಂಗಾಯತ ಧರ್ಮದ ಅಸ್ತಿತ್ವ ನಿರ್ಧಾರವಾಗಬೇಕು. ಹಿಂದೂ ಎನ್ನುವ ಪದವೇ ಸಾಕಷ್ಟು ಚರ್ಚೆಗೀಡಾಗಿದೆ. ಹಿಂದೂ ಎನ್ನುವ ಧರ್ಮವೇ ಇಲ್ಲ, ಬದಲಿಗೆ ಹಲವು ಜಾತಿಗಳ ಘಟಕವನ್ನೇ ಹಿಂದೂ ಎಂದು ಕರೆಯಲಾಗುತ್ತದೆ ಎಂದು ವಾದಿಸುವವರಿದ್ದಾರೆ. ಮೊಗಲರು, ಬ್ರಿಟಿಷರು ಭಾರತದ ಈ ಜಾತಿ ಘಟಕಗಳನ್ನು ಒಟ್ಟಾಗಿ ಹಿಂದೂಗಳು ಎಂದು ಗುರುತಿಸಿದರು. ಹಿಂದೂಸ್ಥಾನದೊಳಗಿರುವ ಜನರೆಲ್ಲ ಹಿಂದೂಗಳು ಎಂದು ಹೇಳುವವರೂ ಇದ್ದಾರೆ. ಭಾರತದಿಂದ ಯಾವುದೇ ಧರ್ಮೀಯನನ್ನು ವಿದೇಶಗಳಲ್ಲಿ ಹಿಂದೂ ಎಂದು ಗುರುತಿಸುವ ಕ್ರಮ ಈಗಲೂ ಇದೆ. ಆರೆಸ್ಸೆಸ್ ಪ್ರತಿಪಾದಿಸುವ ಹಿಂದೂ ಧರ್ಮ, ಪರೋಕ್ಷವಾಗಿ ವೈದಿಕ ಅಥವಾ ಬ್ರಾಹ್ಮಣ ಧರ್ಮವಾಗಿದೆ ಎಂದು ಹೇಳುವವರಿದ್ದಾರೆ. ವೈದಿಕ ಧರ್ಮವನ್ನೇ ಹಿಂದೂ ಧರ್ಮದ ಹೆಸರಿನಲ್ಲಿ ಮತ್ತೆ ಜಾರಿಗೆ ತರುವ ಸಂಚನ್ನು ಸಂಘಪರಿವಾರ ನಡೆಸುತ್ತಿದೆ ಎನ್ನುವ ಆರೋಪ ಇಂದು ನಿನ್ನೆಯದಲ್ಲ. ಬುದ್ಧನನ್ನು ಅವನ ಧರ್ಮವನ್ನು ಹಿಂದೂ ಧರ್ಮದ ಒಂದು ಭಾಗವೆಂದು ನಂಬಿಸಿದವರು, ಲಿಂಗಾಯತ ಧರ್ಮವನ್ನು ತನ್ನೊಳಗೆ ಆಪೋಷನ ತೆಗೆದುಕೊಳ್ಳುವುದು ಕಷ್ಟವೇನಲ್ಲ. ಜಾತಿ, ಅಸಮಾನತೆಯ ವಿರುದ್ಧ 12ನೇ ಶತಮಾನದಲ್ಲಿ ಹುಟ್ಟಿದ್ದು ಲಿಂಗಾಯತ ಧರ್ಮ. ಬಸವಣ್ಣ ಮತ್ತು ಅವನ ಜೊತೆಗಾರರು ಸೇರಿ ಇದನ್ನು ಕಟ್ಟಿ ಬೆಳೆಸಿದರು. ವಚನಗಳೇ ಈ ಧರ್ಮದ ಕೈ ಮರ. ವೈದಿಕ ಧರ್ಮ ಅಥವಾ ಹಿಂದೂ ಧರ್ಮವು ಕೀಳು ಜಾತಿ ಎಂದು ನಿಂದಿಸಿದವರೇ ಈ ವಚನಗಳನ್ನು ಬರೆದರು. ಭಗವದ್ಗೀತೆಯನ್ನು ಲಿಂಗಾಯತರು ಒಪ್ಪುವುದಿಲ್ಲ. ಈ ಎಲ್ಲ ಹಿನ್ನೆಲೆಯಲ್ಲಿ ಆ ಧರ್ಮದ ಅನುಯಾಯಿಗಳು ತಮ್ಮನ್ನು ಪ್ರತ್ಯೇಕ ಧರ್ಮವೆಂದು ಗುರುತಿಸಿ ಎನ್ನುವಾಗ ಅದನ್ನು ಇನ್ನೊಂದು ಧರ್ಮದ ಜನರು ತಡೆಯುವುದು ತಪ್ಪಾಗುತ್ತದೆ. ಯಾಕೆಂದರೆ ಯಾರು ಏನನ್ನು ನಂಬಬೇಕು, ನಂಬಬಾರದು ಎನ್ನುವುದನ್ನು ಒಂದು ಧರ್ಮ ಇನ್ನೊಂದು ಧರ್ಮಕ್ಕೆ ಹೇಳುವಂತಿಲ್ಲ, ಹೇರುವಂತೆಯೂ ಇಲ್ಲ.

 ಆದರೆ ನಿಜವಾದ ಸಮಸ್ಯೆ ಸೃಷ್ಟಿಯಾಗಿರುವುದು ವೀರಶೈವರು ತಾವೂ ‘ಲಿಂಗಾಯತ’ ಸಮುದಾಯಕ್ಕೆ ಸೇರಿದವರು ಎಂದು ಹೇಳುತ್ತಿರುವುದರಿಂದ. ಲಿಂಗಾಯತ ಧರ್ಮ ಮತ್ತು ವೀರಶೈವ ಧರ್ಮ ಬೇರೆ ಬೇರೆಯಲ್ಲ. ಆದುದರಿಂದ ವೀರಶೈವ ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ಹೋರಾಡಬೇಕು ಎನ್ನುವುದು ಭಿನ್ನಮತೀಯರ ವಾದ. ಲಿಂಗಾಯತರು ಮಾತ್ರ ಇದಕ್ಕೆ ಒಪ್ಪುತ್ತಿಲ್ಲ. ವೀರಶೈವಕ್ಕೂ ಲಿಂಗಾಯತ ಧರ್ಮಕ್ಕೂ ಯಾವುದೇ ಸಂಬಂಧವಿಲ್ಲ. ಲಿಂಗಾಯತ ಧರ್ಮದ ಸ್ಥಾಪಕರೇ ಬೇರೆ, ವೀರಶೈವಧರ್ಮದ ಸ್ಥಾಪಕರೇ ಬೇರೆ ಎನ್ನುವುದು ಲಿಂಗಾಯತ ಧರ್ಮೀಯರ ವಾದ. ‘ವೀರಶೈವರು’ ಬೇಕಾದರೆ ತಮ್ಮದೇ ಆದ ಸ್ವತಂತ್ರ ಧರ್ಮವೊಂದನ್ನು ಕೇಳಲಿ. ಆದರೆ ಲಿಂಗಾಯತರ ಜೊತೆಗೆ ಸಂಬಂಧ ಕಲ್ಪಿಸಿಕೊಳ್ಳುವುದು ಬೇಡ ಎಂದು ಇವರು ಆಗ್ರಹಿಸುತ್ತಿದ್ದಾರೆ. ಲಿಂಗಾಯತರೇ ವೀರಶೈವರನ್ನು ತಮ್ಮವರಲ್ಲ ಎಂದು ಹೇಳುತ್ತಿರುವಾಗ, ವೀರಶೈವರು ಲಿಂಗಾಯತರೊಂದಿಗೆ ಬಲವಂತವಾಗಿ ಗುರುತಿಸಲು ಮುಂದಾಗುವುದು ಸರಿಯಾದ ದಾರಿಯಲ್ಲ. ಇಷ್ಟಕ್ಕೂ ಲಿಂಗಾಯತ ಧರ್ಮ ಹುಟ್ಟಿದ್ದು ಹಿಂದೂ ಧರ್ಮ ಅಥವಾ ವೈದಿಕ ಪುರೋಹಿತಶಾಹಿ ವ್ಯವಸ್ಥೆಯನ್ನು ವಿರೋಧಿಸಿ ಮತ್ತು ಅದು ಹುಟ್ಟಿರುವುದು ಕರ್ನಾಟಕದಲ್ಲಿ. ವೀರಶೈವ ಧರ್ಮದ ಸ್ಥಾಪಕರು ಯಾರು ಎನ್ನುವ ಅನ್ವೇಷಣೆಗಿಳಿದಾಗ ವೀರಶೈವರು ಶೈವ ಪಂಥದ ಒಂದು ಶಾಖೆ ಎನ್ನುವುದು ಬಹಿರಂಗವಾಗುತ್ತದೆ. ಇದರ ಮೂಲ ಕರ್ನಾಟಕವಲ್ಲ. ಆಂಧ್ರದ ಕಡೆಗೆ ವೀರಶೈವ ಧರ್ಮದ ಬೇರು ಸಾಗುತ್ತದೆ. ಒಂದು ವೇಳೆ ವೀರಶೈವ ಮತ್ತು ಲಿಂಗಾಯತರು ಒಂದಾಗಿ ‘ಪ್ರತ್ಯೇಕ ಧರ್ಮ’ವನ್ನು ಕೇಳಿದರೆ ಅದಕ್ಕೆ ಅನುಮತಿ ಸಿಗುವುದು ಬಹಳ ಕಷ್ಟ. ಯಾಕೆಂದರೆ, ವೀರಶೈವರ ಹಲವು ಆಚರಣೆಗಳು ವೈದಿಕ ಆಚರಣೆಗಳ ಜೊತೆಗೆ ನೇರ ಸಂಬಂಧವನ್ನು ಹೊಂದಿವೆ. ಜಾತಿ ವ್ಯವಸ್ಥೆ, ಪುರೋಹಿತ ಶಾಹಿ ವ್ಯವಸ್ಥೆ ಅಲ್ಲಿ ಗಟ್ಟಿಯಾಗಿದೆ. ಈ ವೀರಶೈವರ ಕಾರಣದಿಂದಲೇ ಲಿಂಗಾಯತ ಧರ್ಮ ತನ್ನ ಮೂಲ ಆಶಯಗಳಿಂದ ದೂರ ಸರಿಯಿತು. ಲಿಂಗಾಯತ ಆಚರಣೆಗಳಲ್ಲಿ ಗೊಂದಲಗಳು ಏರ್ಪಟ್ಟವು. ಇಂದು ಮತ್ತೆ ಶರಣರು ಜಾಗೃತರಾಗಿ ಬಸವಣ್ಣನ ಧರ್ಮಕ್ಕೆ ಮರಳಲು ಸಿದ್ಧರಾಗಿ ನಿಂತಿದ್ದಾರೆ. ವೀರಶೈವರಿಗೆ ಈಗ ಇರುವ ಆಯ್ಕೆಗಳು ಮೂರು. ಒಂದು ನಮ್ಮದು ಹಿಂದೂ ಧರ್ಮದ ಒಂದು ಶಾಖೆ ಎನ್ನುವುದನ್ನು ಒಪ್ಪಿಕೊಂಡು ಮುಂದುವರಿಯುವುದು. ಎರಡನೆಯದು, ವೀರಶೈವ ಧರ್ಮಕ್ಕಾಗಿ ಪ್ರತ್ಯೇಕ ಆಂದೋಲನ ಮಾಡುವುದು. ಮೂರನೆಯದು, ಸದ್ಯದ ಆಚರಣೆಗಳನ್ನು ತ್ಯಜಿಸಿ ಲಿಂಗಾಯತ ಧರ್ಮವನ್ನು ಸ್ವೀಕರಿಸಿ ಬಸವಣ್ಣನ ಚಿಂತನೆಯ ಜೊತೆಗೆ ಮುಂದುವರಿಯುವುದು. ಇದನ್ನು ಹೊರತು ಪಡಿಸಿದಂತೆ, ಲಿಂಗಾಯತರ ನಂಬಿಕೆಗಳನ್ನು ನಿಯಂತ್ರಿಸುವ ಹಕ್ಕು ವೀರಶೈವರಿಗಿಲ್ಲ.

  ಇಷ್ಟಕ್ಕೂ ಪ್ರತ್ಯೇಕ ಧರ್ಮಕ್ಕಾಗಿ ಈ ಹಿಂದೆ ಹಲವು ಶಾಖೆಗಳು ಹಿಂದೂ ಧರ್ಮದೊಳಗೆ ಬಂಡಾಯ ಎದ್ದಿದ್ದವು. ಆರ್ಯ ಸಮಾಜ ತನ್ನನ್ನು ತಾನು ಪ್ರತ್ಯೇಕ ಧರ್ಮ ಎಂದು ಕರೆದು ನ್ಯಾಯಾಲಯದ ಮೆಟ್ಟಿಲೇರಿದ್ದು ಇತಿಹಾಸ. ಹಾಗೆಯೇ ರಾಮಕೃಷ್ಣ ಮಿಶನ್ ಕೂಡ ತಮ್ಮದು ಪ್ರತ್ಯೇಕ ಧಾರ್ಮಿಕ ಶಾಖೆ ಎಂದು ಹೇಳಿ ನ್ಯಾಯಾಲಯದ ಮೆಟ್ಟಿಲೇರಿತ್ತು. ಈ ಅರ್ಜಿಗಳನ್ನು ನ್ಯಾಯಾಲಯ ಪರಿಶೀಲಿಸಿತ್ತು ಕೂಡ. ಹೀಗಿರುವಾಗ ಸ್ವತಂತ್ರ ಚಿಂತನೆ, ಕ್ರಾಂತಿಕಾರಕ ವಿಚಾರಗಳನ್ನೊಳಗೊಂಡ ಲಿಂಗಾಯತ ಧರ್ಮೀಯರು ಪ್ರತ್ಯೇಕ ಧರ್ಮವನ್ನು ಕೇಳಿದಾಕ್ಷಣ ಅದಕ್ಕೆ ರಾಜಕೀಯವನ್ನು ಆರೋಪಿಸುವುದು ಸರಿಯಲ್ಲ. ಯಾಕೆಂದರೆ, ಲಿಂಗಾಯತ ಸ್ವತಂತ್ರ ಧರ್ಮ ಎನ್ನುವ ಕೂಗಿಗೆ ಹಲವು ದಶಕಗಳ ಇತಿಹಾಸವಿದೆ.ಮೊದಲು ಲಿಂಗಾಯತರ ಕೂಗಿಗೆ ಸರಕಾರ ಕಿವಿಯಾಗಬೇಕು. ಲಿಂಗಾಯತರ ವಾದದ ಹಿಂದಿರುವ ಸತ್ಯಾಸತ್ಯತೆ ಎಷ್ಟು ಎನ್ನುವುದು ಅಧ್ಯಯನಕ್ಕೊಳಪಡಬೇಕು. ಈ ಹಿನ್ನೆಲೆಯಲ್ಲಿ ತಜ್ಞರ ಸಮಿತಿಯನ್ನು ಸ್ಥಾಪಿಸಿದ್ದು ಶ್ಲಾಘನೀಯ. ಆದರೆ ವೀರಶೈವ ಸ್ವಾಮೀಜಿಗಳು ಈ ಸಮಿತಿಯನ್ನು ವಿರೋಧಿಸುತ್ತಿದ್ದಾರೆ. ಸಾರ್ವಜನಿಕವಾಗಿ ಈಗಾಗಲೇ ಲಿಂಗಾಯತ ಸ್ವಾಮೀಜಿಗಳು ವೀರಶೈವರನ್ನು ಚರ್ಚೆಗೆ ಕರೆದಿದ್ದಾರೆ. ವೀರಶೈವ ಮತ್ತು ಲಿಂಗಾಯತ ಹೇಗೆ ಭಿನ್ನ ಎನ್ನುವುದನ್ನು ಹೇಳಿಯೂ ಇದ್ದಾರೆ. ಇವುಗಳಿಗೆಲ್ಲ ಉತ್ತರಿಸುವಲ್ಲಿ ವೀರಶೈವ ಸ್ವಾಮೀಜಿಗಳು ವಿಫಲರಾಗಿದ್ದಾರೆ. ವೀರಶೈವ ಮತ್ತು ಲಿಂಗಾಯತ ಒಂದೇ ಎನ್ನುವುದನ್ನು ತಜ್ಞರಿಗೆ ಮನವರಿಕೆೆ ಮಾಡಿಕೊಡುವುದನ್ನು ಬಿಟ್ಟು, ಸಮಿತಿಯನ್ನೇ ತಿರಸ್ಕರಿಸುವುದು, ಸತ್ಯ ತಮ್ಮ ಜೊತೆಗೆ ಇಲ್ಲ ಎನ್ನುವುದನ್ನು ಒಪ್ಪಿಕೊಂಡಂತೆ. ಕನಿಷ್ಠ ವೀರಶೈವರ ಒಂದು ನಿಯೋಗ ಲಿಂಗಾಯತ ಸ್ವಾಮೀಜಿಗಳನ್ನು ಭೇಟಿ ಮಾಡಿ ಚರ್ಚಿಸುವ ಮೂಲಕವೂ ಈ ಭಿನ್ನಮತವನ್ನು ಇತ್ಯರ್ಥಗೊಳಿಸಬಹುದು. ಬದಲಾಗಿ, ವೈದಿಕ ನಂಬಿಕೆಗಳನ್ನ್ನು ಲಿಂಗಾಯತ ಧರ್ಮದ ಮೇಲೆ ಹೇರಿ, ಅದನ್ನು ಅವರು ಒಪ್ಪಿಕೊಳ್ಳಬೇಕು ಎಂದು ವೀರಶೈವರು ಆಗ್ರಹಿಸುವುದು ಸರಿಯಲ್ಲ. ಅದು ಬಸವಣ್ಣ ಮತ್ತು ಎಲ್ಲ ವಚನಕಾರರಿಗೆ ಮಾಡುವ ಅನ್ಯಾಯವಾಗುತ್ತದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X