ಅಬುಧಾಬಿ ಓಪನ್ನಲ್ಲಿ ಸೆರೆನಾ ವಾಪಸ್
ಅಬುಧಾಬಿ, ಡಿ.27: ವಿಶ್ವದ ಮಾಜಿ ನಂ.1 ಆಟಗಾರ್ತಿ ಸೆರೆನಾ ವಿಲಿಯಮ್ಸ್ ಮುಂದಿನ ಶನಿವಾರ ಆರಂಭವಾಗಲಿರುವ ಮುಬಡಾಲಾ ಪ್ರದರ್ಶನ ಪಂದ್ಯದಲ್ಲಿ ಆಡುವ ಮೂಲಕ ಸಕ್ರಿಯ ಟೆನಿಸ್ಗೆ ವಾಪಸಾಗಿದ್ದಾರೆ. ಮಾತ್ರವಲ್ಲ ಮುಂಬರುವ ಆಸ್ಟ್ರೇಲಿಯ ಓಪನ್ಗೆ ತಯಾರಿ ನಡೆಸಲಿದ್ದಾರೆ. 36ರ ಹರೆಯದ ಸೆರೆನಾ 11 ತಿಂಗಳ ಹಿಂದೆ 23ನೇ ಗ್ರಾನ್ಸ್ಲಾಮ್ ಪ್ರಶಸ್ತಿಯನ್ನು ಗೆದ್ದುಕೊಂಡ ಬಳಿಕ ಯಾವುದೇ ಪಂದ್ಯವನ್ನು ಆಡಿಲ್ಲ. ಆಸ್ಟ್ರೇಲಿಯ ಓಪನ್ ವೇಳೆ ಗರ್ಭಿಣಿಯಾಗಿದ್ದ ಸೆರೆನಾ ಸೆಪ್ಟಂಬರ್ನಲ್ಲಿ ಅಲೆಕ್ಸಿಸ್ ಒಲಿಂಪಿಯಾ ಹೆಸರಿನ ಹೆಣ್ಣುಮಗುವಿಗೆ ಜನ್ಮ ನೀಡಿದ್ದರು.
Next Story