ಗೋವಾದಲ್ಲಿ ಸೋನಿಯಾ ಸೈಕಲ್ ಸವಾರಿ: ಟ್ವಿಟರ್‌ನಲ್ಲಿ ವೈರಲ್ ಆದ ಫೋಟೋ
.jpg)
ಹೊಸದಿಲ್ಲಿ, ಡಿ.28: ಕಾಂಗ್ರೆಸ್ ಪಕ್ಷದ ಅಧ್ಯಕ್ಷತೆಯನ್ನು ಪುತ್ರ ರಾಹುಲ್ ಗಾಂಧಿಗೆ ವರ್ಗಾಯಿಸಿದ ಬಳಿಕ ಇದೀಗ ‘ರಿಲ್ಯಾಕ್ಸ್ ಮೂಡ್’ನಲ್ಲಿರುವ ಸೋನಿಯಾ ಗಾಂಧಿ, ಗೋವಾದಲ್ಲಿ ರಜಾ ದಿನವನ್ನು ಕಳೆಯುತ್ತಿದ್ದಾರೆ. ಗೋವಾದಲ್ಲಿ ಸೋನಿಯಾ ಸೈಕಲ್ ಸವಾರಿ ನಡೆಸುತ್ತಿರುವ ಪೋಟೋ ಟ್ವಿಟರ್‌ನಲ್ಲಿ ವೈರಲ್ ಆಗಿಬಿಟ್ಟಿದೆ.
ಹಿರಿಯ ಕಾಂಗ್ರೆಸ್ ಮುಖಂಡ, ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ದಿವಂಗತ ವಿಲಾಸ್‌ರಾವ್ ದೇಶ್‌ಮುಖ್ ಅವರ ಪುತ್ರ, ಹಿಂದಿ ಸಿನೆಮಾ ನಟ ರಿತೇಶ್ ದೇಶ್‌ಮುಖ್ ಈ ಫೋಟೋವನ್ನು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದವರು. ಫೋಟೋದ ಕೆಳಗೆ ಒಂದು ಅಡಿಬರಹವನ್ನೂ ನೀಡಿದ್ದಾರೆ- “ಕೆಲವು ಚಿತ್ರಗಳು ನಿಮಗೆ ಸಂತಸವನ್ನು ನೀಡುತ್ತವೆ. ಈ ಚಿತ್ರ ಅವುಗಳಲ್ಲಿ ಒಂದು. ಆರೋಗ್ಯ ಸುಧಾರಿಸಲಿ ಮತ್ತು ಸಂತಸವಾಗಿರಿ ಎಂದು ಸೋನಿಯಾಜಿಯವರಿಗೆ ಹಾರೈಸುತ್ತೇನೆ” ಎಂದು ರಿತೇಶ್ ತಿಳಿಸಿದ್ದಾರೆ.
Next Story





