ಗಡಿ ನಿಯಂತ್ರಣ ರೇಖೆಯಲ್ಲಿ ಗುಂಡಿನ ಚಕಮಕಿ

ಜಮ್ಮು, ಡಿ. 28: ಪೂಂಛ್ ಜಿಲ್ಲೆಯ ಗಡಿ ನಿಯಂತ್ರಣಾ ರೇಖೆಯಲ್ಲಿ ಭಾರತ ಹಾಗೂ ಪಾಕಿಸ್ತಾನ ಸೇನಾ ಪಡೆಗಳ ನಡುವೆ ಗುರುವಾರ ಭಾರೀ ಗುಂಡಿನ ಚಕಮಕಿ ನಡೆದಿದೆ. ದೆಗ್ವಾರ್ ಪ್ರದೇಶದಲ್ಲಿ ಪಾಕಿಸ್ತಾನ ಸೇನೆ ಅಪ್ರಚೋದಿತ ಹಾಗೂ ವಿವೇಚನಾರಹಿತ ಶೆಲ್ ಹಾಗೂ ಗುಂಡಿನ ದಾಳಿ ನಡೆಸಿದೆ ಎಂದು ರಕ್ಷಣಾ ಸಚಿವಾಲಯದ ಮೂಲಗಳು ತಿಳಿಸಿವೆ.
ದೆಗ್ವಾರ್‌ನ ಸೇನೆ ಹಾಗೂ ನಾಗರಿಕ ಕೇಂದ್ರಗಳನ್ನು ಗುರಿಯಾಗಿರಿಸಿ ಸಣ್ಣ ಆಯುಧ, ಅಟೋಮ್ಯಾಟಿಕ್ ಹಾಗೂ ಮೋರ್ಟಾರ್ ಬಳಸಿ ಪಾಕಿಸ್ತಾನ ಸೇನೆ ದಾಳಿ ನಡೆಸಿದೆ. ಈ ದಾಳಿ ಬೆಳಗ್ಗೆ 6.30ರ ಹೊತ್ತಿಗೆ ಆರಂಭವಾಯಿತು. ಇದಕ್ಕೆ ಪ್ರತಿಯಾಗಿ ಭಾರತೀಯ ಸೇನಾ ಪಡೆ ದಾಳಿ ನಡೆಸಿತು ಎಂದು ರಕ್ಷಣಾ ಮೂಲಗಳು ತಿಳಿಸಿವೆ. ನರಾಜೌರಿ ಜಿಲ್ಲೆಯ ಕೆರಿ ಪ್ರದೇಶದಲ್ಲಿ ಡಿಸೆಂಬರ್ 23ರಂದು ಪಾಕಿಸ್ತಾನ ಸೇನೆ ಮೇಜರ್ ಹಾಗೂ ಮೂವರು ಯೋಧರನ್ನು ಹತ್ಯೆ ಗೈದ ಬಳಿಕ ಜಮ್ಮು ಕಾಶ್ಮೀರದ ಗಡಿ ನಿಯಂತ್ರಣ ರೇಖಯಲ್ಲಿ ಭಾರತ ಹಾಗೂ ಪಾಕಿಸ್ತಾನದ ನಡುವೆ ಉದ್ವಿಗ್ನತೆ ಸೃಷ್ಟಿಯಾಗಿತ್ತು.
Next Story





