ಸೂಪರ್ ಸಾನಿಕ್ ಇಂಟರ್‌ಸೆಪ್ಟರ್ ಕ್ಷಿಪಣಿ ಯಶಸ್ವಿ ಉಡಾವಣೆ

ಚಂಡಿಪುರ, ಡಿ. 28: ಭಾರತದ ದೇಶಿ ನಿರ್ಮಿತ ಸುಧಾರಿತ ವಾಯು ರಕ್ಷಣಾ ಸೂಪರ್‌ಸಾನಿಕ್ ಇಂಟರ್‌ಸೆಪ್ಟರ್ ಕ್ಷಿಪಣಿಯನ್ನು ಒಡಿಸ್ಸಾದ ಪರೀಕ್ಷಾ ವಲಯದಿಂದ ಪರೀಕ್ಷಾರ್ಥವಾಗಿ ಯಶಸ್ವಿಯಾಗಿ ಉಡಾಯಿಸಿತು.
ಒಳಬರುವ ಯಾವುದೇ ಬ್ಯಾಲೆಸ್ಟಿಕ್ ಕ್ಷಿಪಣಿಯನ್ನು ಹೊಡೆದುರುಳಿಸುವ ಸಾಮರ್ಥ್ಯವನ್ನು ಇದು ಹೊಂದಿದೆ. ಇದು ಈ ವರ್ಷ ನಡೆಸುತ್ತಿರುವ ಮೂರನೇ ಸೂಪರ್‌ಸಾನಿಕ್ ಇಂಟರ್‌ಸೆಪ್ಟರ್ ಕ್ಷಿಪಣಿ ಪರೀಕ್ಷೆ.
ನೇರವಾಗಿ ಗುರಿ ತಲುಪಿ ಯಶಸ್ವಿಯಾಗಿದೆ ಎಂದು ಪರೀಕ್ಷಾ ಉಡಾವಣೆ ಬಳಿಕ ರಕ್ಷಣಾ ಮೂಲಗಳು ತಿಳಿಸಿವೆ.
ಪೂರ್ಣ ಪ್ರಮಾಣದ ಬಹು ಪದರಗಳ ಬ್ಯಾಲೆಸ್ಟಿಕ್ ಕ್ಷಿಪಣಿಗಳ ರಕ್ಷಣಾ ವ್ಯವಸ್ಥೆ ರೂಪಿಸುವ ಪ್ರಯತ್ನದ ಒಂದು ಭಾಗವಾಗಿ 2017 ಜನವರಿ 11 ಹಾಗೂ ಮಾರ್ಚ್ 1ರಂದು ಎರಡು ಇದೇ ರೀತಿಯ ಪರೀಕ್ಷೆಗಳನ್ನು ನಡೆಸಲಾಗಿತ್ತು.
Next Story





