ಕಾರ್ಲ್‌ಸನ್‌ಗೆ ಸೋಲುಣಿಸಿದ ವಿಶ್ವನಾಥನ್ ಆನಂದ್

ರಿಯಾದ್, ಡಿ.28: ಐದು ಬಾರಿ ವಿಶ್ವ ಚಾಂಪಿಯನ್ ಜಯಿಸಿದ್ದ ಭಾರತದ ಗ್ರಾಂಡ್ ಮಾಸ್ಟರ್ ವಿಶ್ವನಾಥನ್ ಆನಂದ್ ಅವರು ವಿಶ್ವದ ನಂ.1 ಚೆಸ್ ಆಟಗಾರ ನಾರ್ವೆಯ ಮ್ಯಾಗ್ನಸ್ ಕಾರ್ಲ್‌ಸನ್ ಅವರಿಗೆ ಇಲ್ಲಿ ನಡೆಯುತ್ತಿರುವ ರಿಯಾದ್ ಓಪನ್ ರ್ಯಾಪಿಡ್ ಚೆಸ್ ಚಾಂಪಿಯನ್‌ಶಿಪ್‌ನಲ್ಲಿ ಸೋಲುಣಿಸಿದ್ದಾರೆ.
ಬುಧವಾರ ನಡೆದ ಸ್ಪರ್ಧೆಯಲ್ಲಿ ಆನಂದ್ ಅವರು ತಮಗೆ 2013ರ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಸೋಲುಣಿಸಿದ್ದ ಕಾರ್ಲ್‌ಸನ್ ವಿರುದ್ಧ ಸೇಡು ತೀರಿಸಿಕೊಂಡರು.
ಆನಂದ್ 34 ನಡೆಗಳಲ್ಲಿ ಗೆಲುವು ಸಾಧಿಸಿ 9 ಪಂದ್ಯಗಳಲ್ಲಿ ಅಜೇಯರಾಗಿ ಮುನ್ನಡೆದಿದ್ದಾರೆ.
5 ಪಂದ್ಯಗಳಲ್ಲಿ ಆನಂದ್ ಜಯ ಗಳಿಸಿದ್ದಾರೆ.4ರಲ್ಲಿ ಡ್ರಾ ಸಾಧಿಸಿದ್ದಾರೆ.
ಕಾರ್ಲ್‌ಸನ್ ವಿರುದ್ಧ ಆನಂದ್ 2013ರಲ್ಲಿ ಸೋತು ವಿಶ್ವ ಚಾಂಪಿಯನ್ ಪಟ್ವನ್ನು ಕಳೆದುಕೊಂಡಿದ್ದರು.
Next Story





