ಕೋಳಿ ಅಂಕ: ಆರು ಮಂದಿ ಬಂಧನ
ಅಮಾಸೆಬೈಲು, ಡಿ.28: ಅಮಾಸೆಬೈಲು ಗ್ರಾಮದ ಜಡ್ಡಿನಗದ್ದೆ ಎಂಬಲ್ಲಿ ಡಿ.27ರಂದು ಸಂಜೆ ವೇಳೆ ಕೋಳಿ ಅಂಕ ನಡೆಸುತ್ತಿದ್ದ ಆರು ಮಂದಿಯನ್ನು ಅಮಾಸೆಬೈಲು ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಸ್ಥಳೀಯರಾದ ಸುರೇಂದ್ರ ನಾಯ್ಕ(47), ಸುಧಾಕರ(22), ರಾಜು ಹರಿಜನ(45), ದಿವಾಕರ ಶೆಟ್ಟಿ(56), ಚಂದ್ರಶೇಖರ(49), ರತ್ನಾಕರ ನಾಯ್ಕ(37) ಎಂದು ಗುರುತಿಸಲಾಗಿದೆ. ಇವರಿಂದ 4 ಕೋಳಿಗಳನ್ನು ವಶಪಡಿ ಸಿಕೊಳ್ಳಲಾಗಿದೆ. ಈ ಬಗ್ಗೆ ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





