12 ಜಾನುವಾರ ವಶ: ಓರ್ವನ ಸೆರೆ
ಅಮಾಸೆಬೈಲು, ಡಿ.28: ಮಚ್ಚಟ್ಟು ಗ್ರಾಮದ ತೊಂಬಟ್ಟು ಎಂಬಲ್ಲಿ ಜೀಪಿ ನಲ್ಲಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ 12 ದನ ಕರು ಮತ್ತು ಓರ್ವನನ್ನು ಅಮಾಸೆಬೈಲು ಪೊಲೀಸರು ಇಂದು ಬೆಳಗಿನ ಜಾವ 3.30ರ ಸುಮಾರಿಗೆ ವಶಕ್ಕೆ ತೆಗೆದುಕೊಂಡಿದ್ದಾರೆ.
ತೊಂಬಟ್ಟು ಕಡೆಯಿಂದ ಬರುತ್ತಿದ್ದ ಜೀಪನ್ನು ಪೊಲೀಸರು ನಿಲ್ಲಿಸಲು ಸೂಚಿಸಿದಾಗ ಅದರ ಚಾಲಕ ಜೀಪನ್ನು ಹಿಂದಕ್ಕೆ ಚಲಾಯಿಸಿದ ಪರಿಣಾಮ ಜೀಪು ನಿಯಂತ್ರಣ ತಪ್ಪಿ ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆಯಿತ್ತೆನ್ನಲಾಗಿದೆ. ಆಗ ಅದರಲ್ಲಿದ್ದ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ 12 ದನಕರು ಮತ್ತು ಮಂಜುನಾಥ ಶೆಟ್ಟಿ ಎಂಬಾತನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದು, ಉಳಿದ ಮೂವರು ಪರಾರಿಯಾದರು. ಈ ಬಗ್ಗೆ ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





