ಅಕ್ರಮ ಮರಳುಗಾರಿಕೆ: ಮರಳು ಸಹಿತ ವಾಹನ ವಶ
ಬೈಂದೂರು, ಡಿ.28: ಶಿರೂರು ಕರಿಕಟ್ಟೆಯ ರಾಷ್ಟ್ರೀಯ ಹೆದ್ದಾರಿ 66ರ ಬಳಿ ಡಿ. 26ರಂದು ರಾತ್ರಿ ವೇಳೆ ನಡೆಯುತ್ತಿದ್ದ ಅಕ್ರಮ ಮರಳುಗಾರಿಕೆ ದಾಳಿ ನಡೆಸಿದ ಅಧಿಕಾರಿಗಳ ತಂಡ ವಾಹನ ಹಾಗೂ ಸೊತ್ತುಗಳನ್ನು ವಶಪಡಿಸಿ ಕೊಂಡಿದೆ.
ಖಚಿತ ಮಾಹಿತಿಯಂತೆ ಭೂ ವಿಜ್ಞಾನಿ ಮಹೇಶ್, ಕೆರಾಡಿ ಗ್ರಾಪಂ ಮತ್ತು ಗೃಹರಕ್ಷಕ ದಳದ ಸಿಬ್ಬಂದಿಗಳು ದಾಳಿ 30 ಟನ್ ಸಾಮಾನ್ಯ ಮರಳು ಸಾಗಾಟ ಮಾಡುತ್ತಿದ್ದ ಮೂರು ವಾಹನವನ್ನು ಮರಳು ಸಮೇತ ವಶಪಡಿಸಿಕೊಂಡರು. ಈ ವೇಳೆ ಚಾಲಕರು ಪರಾರಿಯಾಗಿದ್ದಾರೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





