ಮಲ್ಪೆ ಬೀಚ್: ಪಾರ್ಕಿಂಗ್ ವ್ಯವಸ್ಥೆ
ಉಡುಪಿ, ಡಿ.28: ಮಲ್ಪೆ ಬೀಚ್‌ನಲ್ಲಿ ಡಿ. 29ರಿಂದ 31ರವರೆಗೆ ಹಮ್ಮಿಕೊಳ್ಳ ಲಾದ ಉಡುಪಿ ಪರ್ಬದ ಹಿನ್ನೆಲೆಯಲ್ಲಿ ಮಲ್ಪೆ ಬೀಚ್‌ಗೆ ಬರುವ ಪ್ರವಾಸಿಗರು ಮತ್ತು ಸಾರ್ವಜನಿಕರ ಘನ ವಾಹನಗಳಿಗೆ ಮಲ್ಪೆಯ ಗಾಂಧಿ ಶತಾಬ್ದಿ ಶಾಲೆಯ ಮೈದಾನದಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ.
ಮಲ್ಪೆ ಬೀಚ್‌ನಿಂದ ನಿರ್ಗಮಿಸುವ ಲಘು ವಾಹನಗಳಿಗೆ ಮಲ್ಪೆ ಬೀಚ್- ಸಿಟಿಜನ ಸರ್ಕಲ್- ಕೊಡವೂರು- ಆದಿ ಉಡುಪಿ- ಉಡುಪಿಗೆ ಹೋಗಲು ವ್ಯವಸ್ಥೆ ಮಾಡಲಾಗಿದೆ. ಸಾರ್ವಜನಿಕರು ಸಹಕರಿಸುವಂತೆ ಪೊಲೀಸ್ ಇಲಾಖೆ ಪ್ರಕಟಣೆಯಲ್ಲಿ ಮನವಿ ಮಾಡಿದೆ.
Next Story





