ಕ್ಯಾನ್ಸರ್ ವಿರುದ್ಧ ಅರಿಷಿಣ ಹೇಗೆ ಹೋರಾಡುತ್ತದೆ....?
ಭಾರತೀಯ ಅಡುಗೆ ಮನೆಗಳಲ್ಲಿ ಸಾಮಾನ್ಯವಾಗಿರುವ ಅರಿಷಿಣ ಹಲವಾರು ಆರೋಗ್ಯ ಲಾಭಗಳನ್ನು ನೀಡುತ್ತದೆ. ಅದು ಕ್ಯಾನ್ಸರ್ ವಿರುದ್ಧ ಪರಿಣಾಮಕಾರಿಯಾಗಿ ಹೋರಾಡುತ್ತದೆ. ಕ್ಯಾನ್ಸರ್ ವಿರೋಧಿ ಸಂಯುಕ್ತವಾಗಿರುವ ಕರ್ಕುಮಿನ್ ಅನ್ನು ಒಳಗೊಂಡಿರುವ ಅದು ಕ್ಯಾನ್ಸರ್ ವಿರುದ್ಧದ ಹೋರಾಟದಲ್ಲಿ ಹೇಗೆ ನೆರವಾಗುತ್ತದೆ ಎನ್ನುವುದರ ಕುರಿತು ಕೆಲವು ಮಾಹಿತಿಗಳು ಇಲ್ಲಿವೆ....
►ಕ್ಯಾನ್ಸರ್ ಕೋಶಗಳನ್ನು ಕೊಲ್ಲುತ್ತದೆ
ಅರಿಷಿಣದಲ್ಲಿರುವ ಕರ್ಕುಮಿನ್ ತನ್ನ ಕ್ಯಾನ್ಸರ್ ವಿರೋಧಿ ಗುಣಕ್ಕಾಗಿ ಪ್ರಸಿದ್ಧವಾಗಿದೆ. ಇದನ್ನು ಹಲವಾರು ಸಂಶೋಧನೆಗಳು ದೃಢಪಡಿಸಿವೆ. ನಾವು ಸೇವಿಸುವ ಆಹಾರದಲ್ಲಿ ಅರಿಷಿಣದ ನಿಯಮಿತ ಬಳಕೆ ಕ್ಯಾನ್ಸರ್ ಕೋಶಗಳ ವಿರುದ್ಧ ಪರಿಣಾಮಕಾರಿಯಾಗಿ ಹೋರಾಡುತ್ತದೆ.
►ಸರಿಯಾದ ಪ್ರಮಾಣದಲ್ಲಿ ಅರಿಷಿಣದ ಸೇವನೆಯು ಕ್ಯಾನ್ಸರ್ ಪೂರ್ವ ಗಾಯಗಳ, ವಿಶೇಷವಾಗಿ ಬಾಯಿಹುಣ್ಣುಗಳ ಬೆಳವಣಿಗೆಯನ್ನು ತಡೆಯುತ್ತದೆ. ಅರಿಷಿಣದ ಎಣ್ಣೆಯು ಗರ್ಭಕಂಠದ ಕ್ಯಾನ್ಸರ್ ಬೆಳವಣಿಗೆಯನ್ನು ತಡೆಯುತ್ತದೆ.
►ಕ್ಯಾನ್ಸರ್ ಕೋಶಗಳ ಸ್ಥಾನಾಂತರವನ್ನು ತಡೆಯುತ್ತದೆ
ಮೆಟಾಸ್ಟಾಸಿಸ್ ಎಂದು ಕರೆಯಲಾಗುವ,ಕ್ಯಾನ್ಸರ್ ಕೋಶಗಳು ಶರೀರವಿಡೀ ಹರಡುವ ಪ್ರಕ್ರಿಯೆಯನ್ನು ತಡೆಯಲು ಅರಿಷಿಣ ನೆರವಾಗುತ್ತದೆ. ಅದು ಕ್ಯಾನ್ಸರ್ ಕೋಶಗಳ ವೃದ್ಧಿಯನ್ನು ತಡೆಯಲು ಮತ್ತು ಟ್ಯೂಮರ್‌ಗಳಲ್ಲಿ ಹೊಸ ರಕ್ತನಾಳಗಳ ಅಭಿವೃದ್ಧಿಯಲ್ಲಿ ನೆರವಾಗುತ್ತದೆ.
►ಪ್ರಮುಖ ಅಂಗಾಂಗಗಳಿಗೆ ರಕ್ಷಣೆ ನೀಡುತ್ತದೆ
ಕರ್ಕುಮಿನ್‌ನ ಕ್ಯಾನ್ಸರ್ ನಿರೋಧಕ ಗುಣದ ಜೊತೆಗೆ ಉತ್ಕರ್ಷಣ ನಿರೋಧಕಗಳನ್ನೂ ಸಮೃದ್ಧವಾಗಿ ಹೊಂದಿರುವ ಅರಿಷಿಣವು ಕ್ಯಾನ್ಸರ್ ನಂಜು ಶರೀರದ ಪ್ರಮುಖ ಅಂಗಾಂಗಗಳಿಗೆ ಹಾನಿಯುಂಟು ಮಾಡುವುದನ್ನು ತಡೆಯುತ್ತದೆ. ಇದು ವಿವಿಧ ವಿಧಗಳ ಕ್ಯಾನ್ಸರ್‌ಗಳನ್ನು ತಡೆಯುವಲ್ಲಿ ನೆರವಾಗುತ್ತದೆ.
►ಉರಿಯೂತವನ್ನು ನಿಯಂತ್ರಿಸುತ್ತದೆ
ಅರಿಷಿಣ ಉರಿಯೂತ ನಿಯಂತ್ರಣ ಗುಣವನು ಹೊಂದಿದೆ. ನಿಮಿತವಾಗಿ ಅರಿಷಿಣದ ಬಳಕೆಯಿಂದ ಕ್ಯಾನ್ಸರ್‌ಗೆ ಸಂಬಂಧಿಸಿದ ಉರಿಯೂತದ ವಿರುದ್ಧ ಹೋರಾಡಲು ಸಾಧ್ಯವಾಗುತ್ತದೆ. ಶ್ವಾಸಕೋಶದ ಕ್ಯಾನ್ಸರ್‌ಗೆ ಸಂಬಂಧಿಸಿದಂತೆ ಅರಿಷಿಣದ ಬಳಕೆ ತುಂಬ ಉಪಯುಕ್ತವಾಗಿದೆ.
►ಕ್ಯಾನ್ಸರ್ ವಿರುದ್ಧ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ
ಅರಿಷಿಣವು ಶರೀರದ ರೋಗ ನಿರೋಧಕ ವ್ಯವಸ್ಥೆಯನ್ನು ಬಲಗೊಳಿಸುವ ಮೂಲಕ ಕ್ಯಾನ್ಸರ್ ವಿರುದ್ಧ ಹೋರಾಟಕ್ಕೆ ನೆರವಾಗುತ್ತದೆ. ಅದರಲ್ಲಿರುವ ಕರ್ಕುಮಿನ್ ನಿರೋಧಕ ವ್ಯವಸ್ಥೆಯನ್ನು ಕ್ರಮಬದ್ಧಗೊಳಿಸಲು ನೆರವಾಗುತ್ತದೆ ಮತ್ತು ಕ್ಯಾನ್ಸರ್ ವಿರುದ್ಧ ಪರಿಣಾಮಕಾರಿ ದಾಳಿಯನ್ನು ಸಂಘಟಿಸುತ್ತದೆ.
►ವಿಕಿರಣ ಚಿಕಿತ್ಸೆಯ ಅಡ್ಡ ಪರಿಣಾಮಗಳನ್ನು ತಗ್ಗಿಸುತ್ತದೆ
ಕ್ಯಾನ್ಸರ್ ರೋಗಿಗಳಿಗೆ ಕಿಮೊಥೆರಪಿ ಮತ್ತು ರೇಡಿಯೊ ಥೆರಪಿಯನ್ನು ನೀಡಲಾಗುತ್ತದೆ. ಇವೆರಡೂ ಚಿಕಿತ್ಸೆಗಳು ವ್ಯಾಪಕ ಅಡ್ಡ ಪರಿಣಾಮಗಳನ್ನು ಹೊಂದಿವೆ. ಅರಿಷಿಣದಲ್ಲಿರುವ ಕರ್ಕುಮಿನ್ ಈ ಅಡ್ಡ ಪರಿಣಾಮಗಳನ್ನು ತಗ್ಗಿಸುತ್ತದೆ.
►ಟ್ಯೂಮರ್ ಬೆಳವಣಿಗೆಯ ವಿರುದ್ಧ ಹೋರಾಡುತ್ತದೆ
ಶರೀರದಲ್ಲಿ ಬೆಳೆಯುವ ಗಡ್ಡೆಗಳು ಕ್ಯಾನ್ಸರ್‌ನಿಂದಾಗಿರಬಹುದು ಅಥವಾ ಕ್ಯಾನ್ಸರ್ ಅಲ್ಲದ ಸಾದಾ ಗಡ್ಡೆಗಳಾಗಿರಬಹುದು. ಕರ್ಕುಮಿನ್ ಇಂತಹ ಗಡ್ಡೆಗಳ ಅಥವಾ ಟ್ಯೂಮರ್‌ಗಳಿಗೆ ಕಾರಣವಾಗುವ ಅಂಶಗಳ ವಿರುದ್ಧ ಹೋರಾಡುತ್ತದೆ. ವಿಶೇಷವಾಗಿ ಪ್ರಾಸ್ಟೇಟ್, ಸ್ತನ, ಶ್ವಾಸಕೋಶ ಮತ್ತು ಮಿದುಳಿಗೆ ಸಂಬಂಧಿಸಿದ ಟ್ಯೂಮರ್ ಬೆಳವಣಿಗೆ ಯನ್ನು ಅದು ತಡೆಯುತ್ತದೆ.
►ಔಷಧಿ ಪ್ರತಿರೋಧವನ್ನು ನಿವಾರಿಸುತ್ತದೆ
ಔಷಧಿ ಪ್ರತಿರೋಧ ಕ್ಯಾನ್ಸರ್ ರೋಗಿಗಳು ಎದುರಿಸುವ ಪ್ರಮುಖ ಸವಾಲು ಆಗಿದೆ. ಕರ್ಕುಮಿನ್ ಕ್ಯಾನ್ಸರ್ ಕೋಶಗಳನ್ನು ನಿಯಂತ್ರಿಸುವ ಮೂಲಕ ಔಷಧಿ ಪ್ರತಿರೋಧವನ್ನು ನಿವಾರಿಸುತ್ತದೆ ಎನ್ನುವುದನ್ನು ಹಲವಾರು ಅಧ್ಯಯನಗಳು ದೃಢಪಡಿಸಿವೆ. ದಿನಕ್ಕೆ 6-8 ಗ್ರಾಂ ಅರಿಷಿಣದ ಸೇವನೆ ಕ್ಯಾನ್ಸರ್ ಅಪಾಯದ ವಿರುದ್ಧ ಪರಿಣಾಮಕಾರಿಯಾಗಿರುತ್ತದೆ.