ಉಡುಪಿ: ಪಾಕಿಸ್ತಾನದ ವಿರುದ್ಧ ಬಜರಂಗದಳ ಪ್ರತಿಭಟನೆ

ಉಡುಪಿ, ಡಿ.29: ಭಾರತೀಯ ನೌಕಾ ಪಡೆಯ ಮಾಜಿ ಅಧಿಕಾರಿ ಕುಲ ಭೂಷಣ್ ಜಾಧವ್ ಪತ್ನಿ ಮತ್ತು ತಾಯಿಯನ್ನು ಅವಮಾನಿಸಿದ ಪಾಕಿಸ್ತಾನದ ಅಧಿಕಾರಿಗಳ ಕ್ರಮವನ್ನು ಖಂಡಿಸಿ ಉಡುಪಿ ಜಿಲ್ಲಾ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳ ಶುಕ್ರವಾರ ಅಜ್ಜರಕಾಡು ಹುತಾತ್ಮ ಸ್ಮಾರಕದ ಎದುರು ಪ್ರತಿಭಟನೆ ನಡೆಸಿತು.
ಪಾಕಿಸ್ತಾನದ ವಿರುದ್ಧ ಘೋಷಣೆ ಕೂಗಿದ ಪ್ರತಿಭಟನಕಾರರು ಆ ದೇಶದ ಧ್ವಜ ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು. ಬಜರಂಗದಳದ ವಿಭಾಗ ಸಂಚಾಲಕ ಕೆ.ಆರ್.ಸುನಿಲ್ ಮಾತನಾಡಿದರು. ಈ ಸಂದರ್ಭದಲ್ಲಿ ಉಡುಪಿ ತಾಪಂ ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್, ಮುಖಂಡರಾದ ಲೋಕೇಶ್, ಭಾಗ್ಯಶ್ರೀ ಐತಾಳ್, ರಮಾ ರಾವ್ ಮೊದಲಾದವರು ಉಪಸ್ಥಿತರಿದ್ದರು.
Next Story





