ಮಹಾದಾಯಿ: ಅಮಿತ್ ಶಾ ಸ್ಕ್ರಿಪ್ಟ್ ಆಧರಿಸಿ ಬಿಎಸ್ ವೈ- ಪಾರಿಕ್ಕರ್ ನಾಟಕ; ಸಿಎಂ ಲೇವಡಿ

ಚಿಕ್ಕಬಳ್ಳಾಪುರ, ಡಿ, 29: ಉತ್ತರ ಕರ್ನಾಟಕ ಭಾಗಕ್ಕೆ ಕುಡಿಯುವ ನೀರು ಒದಗಿಸುವ ಮಹದಾಯಿ ವಿಚಾರದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಸ್ಕ್ರಿಪ್ಟ್ ಆಧರಿಸಿ ಬಿಎಸ್ ವೈ ಮತ್ತು ಗೋವಾ ಸಿಎಂ ಮನೋಹರ್ ಪಾರಿಕ್ಕರ್ ನಾಟಕ ಮಾಡುತ್ತಿದ್ದಾರೆ ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ.
ಶುಕ್ರವಾರ ಇಲ್ಲಿಯ ಬಾಗೇಪಲ್ಲಿ ತಾಲೂಕು ಮೈದಾನದಲ್ಲಿ ಜಿಲ್ಲಾಡಳಿತದ ವತಿಯಿಂದ ಏರ್ಪಡಿಸಿದ್ದ ಸಮಾರಂಭದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಕೇವಲ ಒಂದು ತಿಂಗಳ ಒಳಗೆ ನೀರು ಹರಿಸುವ ಭರವಸೆ ನೀಡಿದ ಯಡಿಯೂರಪ್ಪ ಇದೀಗ ತಾವೇ ಹಗ್ಗ ಕೊಟ್ಟು ಕೈಕಟ್ಟಿಸಿಕೊಂಡಿದ್ದಾರೆ.ಇದೀಗ ಮುಂದಿನ ಚುನಾವಣೆಯ ಬಳಿಕ ಮಾತುಕಥೆ ಮಾಡೋಣ ಎಂಬ ಮಾತುಗಳನ್ನು ಮನೋಹರ್ ಪಾರಿಕ್ಕರ್ ಹೇಳುತ್ತಿದ್ದಾರೆ.ಜನರ ಜೀವನದ ಜೊತೆ ಬಿಜೆಪಿ ಮುಖಂಡರು ಚೆಲ್ಲಾಟ ಆಡುತ್ತಿದ್ದು, ಮಹಾದಾಯಿ ನ್ಯಾಯಾಧೀಕರಣದಲ್ಲಿ ರಾಜ್ಯಕ್ಕೆ ನ್ಯಾಯ ದೊರೆಯಲಿದೆ ಎಂದು ಸಿದ್ದರಾಮಯ್ಯ ಭರವಸೆ ವ್ಯಕ್ತಪಡಿಸಿದರು.
ಎತ್ತಿನಹೊಳೆ ಯೋಜನೆ ವಿಚಾರದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಜಿಲ್ಲೆಗೊಂದು ಹೇಳಿಕೆ ನೀಡುವ ಮೂಲಕ ದಂದ್ವ ನೀತಿ ಅನುಸರಣೆ ಮಾಡುತ್ತಿದ್ದು, ಇಂತಹ ಜನರನ್ನು ಯಾವುದೇ ಕಾರಣಕ್ಕೂ ನಂಬಬೇಡಿ ಎಂದು ಮನವಿ ಮಾಡಿದರು.





