ಡಿ. 30: ಅಲ್ ಬಲಾಗ್‌ನಿಂದ ಧಾರ್ಮಿಕ ಪ್ರವಚನ
ಮಂಗಳೂರು, ಡಿ. 29: ಅಲ್ ಬಲಾಗ್ ವತಿಯಿಂದ ನಗರದ ಬೋಳಾರದ ಶಾದಿ ಮಹಲ್‌ನಲ್ಲಿ ಡಿ. 30ರಂದು ಸಂಜೆ 6:30ಕ್ಕೆ ಧಾರ್ಮಿಕ ಪ್ರವಚನ ಹಮ್ಮಿಕೊಳ್ಳಲಾಗಿದೆ.
ಉತ್ತರ ಭಾರತದ ಪ್ರಸಿದ್ಧ ಮುಸ್ಲಿಂ ಯುವ ಧಾರ್ಮಿಕ ಪಂಡಿತ ಶೇಖ್ ಅಬ್ದುಲ್ ಗಫ್ಫಾರ್ ಸೂಫಿ ಬನಾರಸ್ ಅವರು ಪ್ರಥಮವಾಗಿ ಮಂಗಳೂರಿಗೆ ಆಗಮಿಸಲಿದ್ದು, ಉರ್ದು ಭಾಷೆಯಲ್ಲಿ ಪ್ರವಚನ ನೀಡಲಿದ್ದಾರೆ. ಹಾಗೂ ಅಲಿಘಡ ವಿಶ್ವವಿದ್ಯಾಲಯದ ಡಾಕ್ಟರೇಟ್ ಪದವಿ ಪಡೆದ ಯುವ ಧಾರ್ಮಿಕ ಪಂಡಿತ ಶೇಖ್ ಡಾ. ಹಫೀಝ್ ಸ್ವಲಾಹಿ ಅವರು ಬ್ಯಾರಿ ಭಾಷೆಯಲ್ಲಿ ಪ್ರವಚನ ನೀಡಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
Next Story





