ಬೆಂಗಳೂರು :ಪ್ರಾಧ್ಯಾಪಕರ ವೇತನ ಬಿಡುಗಡೆಗೆ ಆಗ್ರಹ
ಬೆಂಗಳೂರು, ಡಿ.29: ವಿಶ್ವವಿದ್ಯಾಲಯಗಳ ಧನ ಸಹಾಯ ಆಯೋಗವು 2006 ರಲ್ಲಿ ನಿಗದಿ ಮಾಡಿರುವ ಕಾಲೇಜು ಅಥವಾ ವಿವಿಗಳ ಪ್ರಾಧ್ಯಾಪಕರ ವೇತನ ಹಾಗೂ ಇನ್ನಿತರ ಅನುದಾನಗಳನ್ನು ಕೂಡಲೇ ಸರಕಾರ ಪೂರ್ಣವಾಗಿ ಬಿಡುಗಡೆ ಮಾಡಬೇಕು ಎಂದು ಬೆಂಗಳೂರು ವಿವಿ ಎಸ್ಸಿ, ಎಸ್ಟಿ ಪ್ರಾಧ್ಯಾಪಕರ ಸಂಘ ಆಗ್ರಹಿಸಿದೆ.
ಯುಜಿಸಿ ನೀಡಿರುವ ಶಿಫಾರಸ್ಸುಗಳನ್ನು ಅಂಗೀಕಾರ ಮಾಡಿ ನಂತರ ಅದನ್ನು ಒಟ್ಟಾರೆಯಾಗಿ ಪಾಲಿಸದೇ ಪ್ರಾಧ್ಯಾಪಕರಿಗೆ ಸರಕಾರ ಅನ್ಯಾಯ ಮಾಡುತ್ತಿದೆ. ಈ ನಿಟ್ಟಿನಲ್ಲಿ ಅಧ್ಯಾಪಕರು ವೌಲ್ಯಮಾಪನ ಬಹಿಷ್ಕರಿಸಿದ್ದು, ಅವರ ಎಲ್ಲ ಬೇಡಿಕೆಗಳು ನ್ಯಾಯ ಸಮ್ಮತವಾಗಿವೆ. ಹೀಗಾಗಿ, ಕೂಡಲೇ ಅದನ್ನು ಈಡೇರಿಸಬೇಕು. ಸರಕಾರದಿಂದಾಗಿರುವ ಲೋಪಗಳನ್ನು ಸರಿಪಡಿಸಿ, ಶಿಕ್ಷಕರಿಗೆ ಆಗಿರುವ ಅನ್ಯಾಯವನ್ನು ಶೀಘ್ರವಾಗಿ ಪರಿಹರಿಸಬೇಕು ಎಂದು ಸಂಘ ಮನವಿ ಮಾಡಿದೆ.
Next Story





