ಹನೂರು:ಅಪರಾಧ ತಡೆ ಮಾಸಾಚರಣೆ ಕಾರ್ಯಕ್ರಮ

ಹನೂರು,ಡಿ.29: ಕ್ಷೇತ್ರ ವ್ಯಾಪ್ತಿಯ ಮಹದೇಶ್ವರ ಬೆಟ್ಟದ ಶಾಲಾ ಮಕ್ಕಳು ಮತ್ತು ಮಹದೇಶ್ವರ ಬೆಟ್ಟ ಪೋಲೀಸ್ ಠಾಣೆಯ ಸಹಯೋಗದಲ್ಲಿ ಅಪರಾಧ ತಡೆ ಮಾಸಾಚರಣೆಯ ಜಾಥಾ ಏರ್ಪಡಿಸಿಲಾಗಿತ್ತು.
ನಂತರ ಈ ಜಾಥವನ್ನು ಉದ್ದೇಶಿಸಿ ಮಾತನಾಡಿದ ಮಲೈಮಹದೇಶ್ವರ ಬೆಟ್ಟದ ಆರಕ್ಷಕ ನಿರೀಕ್ಷಕರಾದ ಶಣ್ಮುಗವರ್ಮ ಕಾನೂನಿನ ಅರಿವೊಂದೇ ಅಪರಾಧ ತಡೆಗಟ್ಟಲು ಸಾದ್ಯ. ಪ್ರತಿ ಗ್ರಾಮದಲ್ಲಿ ಜನಸ್ನೇಹಿ ಪೋಲಿಸನ್ನು ನೇಮಕ ಮಾಡಿದ್ದು, ಅವರ ವಿಳಾಸ, ಪೋನ್ ನಂಬರ್ ನಿಮ್ಮ ಗ್ರಾಮದಲ್ಲೇ ಸಿಗುತ್ತದೆ. ಯಾವುದಾದರು ಅಪರಾಧ ಕಂಡುಬಂದಲ್ಲಿ ಈ ನಂಬರ್ ಗೆ ಕರೆ ಮಾಡಬಹುದೆಂದು ತಿಳಿಸಿದರು.
ಗ್ರಾಮಗಳಲ್ಲಿ ಅಪ್ರಾಪ್ತ ಹುಡುಗಿಯರ ಮದುವೆ, ಲೈಂಗಿಕ ಕಿರುಕುಳ, ಪರವಾನಗಿ ಇಲ್ಲದೆ ಬೈಕ್ ಸವಾರಿ, ಬೈಕ್ ನಲ್ಲಿ ಮೂರು ಜನ ಪ್ರಯಾಣ ಮಾಡುವುದು ಇವೆಲ್ಲವೂ ಅಪರಾಧವಾಗಿರುತ್ತದೆ. ಸಮುದಾಯದ ಜನರಲ್ಲಿ ಕಾನೂನಿನ ಅರಿವು ಇದ್ದಲ್ಲಿ ಖಂಡಿತಾ ಅಪರಾಧ ಪ್ರಕರಣಗಳು ಕಡಿಮೆಯಾಗುತ್ತವೆ. ಪೋಲೀಸ್ ಎಂದರೆ ಸಾಮಾನ್ಯವಾಗಿ ಭಯ, ಹಿಂಜರಿಕೆ ಇವೆಲ್ಲವೂ ಇದೆ. ಆದರೆ ಭಯ ಪಡುವ ಯಾವ ಪ್ರಮೇಯವೂ ಇಲ್ಲ. ದೈರ್ಯವಾಗಿ ಪೋಲಿಸ್ ಸಿಬ್ಬಂಧಿ ಜೊತೆ ಉತ್ತಮ ಸಂಬಂಧ ಕಾಪಾಡಿಕೊಳ್ಳುವಂತೆ ತಿಳಿಸಿದರು. ಶಾಲಾ ಕಾಲೇಜಿನ ಮಕ್ಕಳು ಮೊಬೈಲ್ ಹುಚ್ಚಿನಿಂದಾಗಿ ಹಲವಾರು ಸಮಸ್ಯೆಗಳಾಗಿರುವ ಉದಾಹರಣೆಗಳಿವೆ. ಪೇಸ್ ಬುಕ್, ವಾಟ್ಸ್ ಆಪ್ ಗೀಳಿನಿಂದಾಗಿ ಓದಿನ ಗಮನ ಕಡಿಮೆ ಯಾಗುವುದರಿಂದ ಆದಷ್ಟು ಮೊಬೈಲ್ ಬಳಕೆ ಕಡಿಮೆ ಮಾಡಿಕೊಳ್ಳುವಂತೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಮಹದೇಶ್ವರನಬೆಟ್ಟದ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಚೇತನ್, ಎಂ.ಡಿ.ಸಿ.ಸಿ ಬ್ಯಾಂಕಿನ ವ್ಯವಸ್ಥಾಪಕ ಹರೀಶ್ ಹಾಗು ಮಹದೇಶ್ವರ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು.







