ಬ್ರಾಹ್ಮಣವಾದದ ವಿರುದ್ಧ ಜನ ನಿಲ್ಲಲಿ : ಕೆ.ಎಲ್. ಅಶೋಕ್

ಚಿಕ್ಕಮಗಳೂರು, ಡಿ.29: ಅಂಬೇಡ್ಕರರು ಹೇಳಿದಂತೆ ಬ್ರಾಹ್ಮಣವಾದ ಮತ್ತು ಬಂಡವಾಳವಾದದ ವಿರುದ್ಧ ಜನ ನಿಲ್ಲುವಂತಾಗಬೇಕು. ಬ್ರಾಹ್ಮಣವಾದದ ವಿರುದ್ಧ ಶೂದ್ರ, ಹಿಂದುಳಿದ ದಲಿತ ಹಾಗೂ ಅಲ್ಪ ಸಂಖ್ಯಾತ ಸಮುದಾಯಗಳು ಒಟ್ಟಾಗಿ ನಿಲ್ಲುವಂತೆ ಆಗಬೇಕು ಎಂದು ಕರ್ನಾಟಕ ಕೋಮು ಸೌಹಾರ್ದ ವೇದಿಕೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಎಲ್. ಅಶೋಕ್ ಹೇಳಿದ್ದಾರೆ.
ಅವರು ಶುಕ್ರವಾರ ನಗರದ ಜಿಲ್ಲಾ ಆಟದ ಮೈದಾನದಲ್ಲಿ ಕುವೆಂಪು ವೇದಿಕೆಯಲ್ಲಿ ಕೋಮು ಸೌಹಾರ್ದ ವೇದಿಕೆಯ 15ನೇ ವರ್ಷದ ಸಮ್ಮಿಲನ ಸಂಘರ್ಷ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕೋಮುವಾದ ಪ್ರಜಾಪ್ರಭುತ್ವ, ಮಾನವೀಯತೆಯ ಮೇಲೆ ಯಾರು ಎಷ್ಟು ಆಕ್ರಮಣಕಾರಿಯಾಗಿ ದಾಳಿ ಮಾಡುತ್ತಾರೆ ಎಂಬ ವಿಚಾರದಲ್ಲಿ ನರೇಂದ್ರ ಮೋದಿ, ಯೋಗಿ ಆದಿತ್ಯನಾಥ್, ಅನಂತಕುಮಾರ ಹೆಗಡೆಯಂಥವರ ನಡುವೆ ಸ್ಪರ್ಧೆ ನಡೆಯುತ್ತಿವೆ. ಇಂತಹ ವೈವಿಧ್ಯಮಯ ದೇಶವನ್ನು ಕೋಮುವಾದಿ ಅಜೆಂಡಾಕ್ಕೆ ಬಗ್ಗಿಸಿ, ಒಗ್ಗಿಸಿ ನರಹತ್ಯೆಗೆ ಸಿದ್ಧಗೊಳಿಸುತ್ತಿರುವುದು ಆತಂಕದಾಯಕ ಎಂದರು.
Next Story





