ಬಣಕಲ್: ಕಾರುಗಳ ಢಿಕ್ಕಿ; ಗಂಭೀರ ಗಾಯ

ಬಣಕಲ್, ಡಿ.30: ಮೂಡಿಗೆರೆಯಿಂದ ಮಂಗಳೂರಿಗೆ ಸಾಗುತ್ತಿದ್ದ ಲೋಗನ್ ಕಾರು ಮತ್ತು ಧರ್ಮಸ್ಥಳದಿಂದ ಬೆಂಗಳೂರಿಗೆ ತೆರಳುತ್ತಿದ್ದ ಬೆಂಗಳೂರು ಮೂಲದ ಕಾರುಗಳ ನಡುವೆ ಚಾರ್ಮಾಡಿ ಘಾಟ್‍ನ ಆಲೇಖಾನ್ ಸಮೀಪ ಢಿಕ್ಕಿ ಸಂಭವಿಸಿದೆ.
ಕಾರಿನಲ್ಲಿದ್ದ ಮೂಡಿಗೆರೆ ಸಮೀಪದ ಬಿಳುಗುಳದ ಪೀಟರ್ ಫೆರ್ನಾಂಡಿಸ್ ಮತ್ತು ಚಾಲ್ರ್ಸ್ ಫೆರ್ನಾಂಡಿಸ್ ಎಂಬವರಿಗೆ ತಲೆ ಮತ್ತು ಕಾಲಿಗೆ ಗಂಭೀರವಾದ ಗಾಯಗಳಾಗಿದೆ.
ಅಫಘಾತವಾದೊಡನೆ ಅದೆ ಮಾರ್ಗವಾಗಿ ಬರುತ್ತಿದ್ದ ಜರೋಮ್ ನೊರೋನಾ ಎಂಬವರು ಗಾಯಾಳುಗಳನ್ನು ಕೂಡಲೆ ಸಮೀಪದ ಆಸ್ಪತ್ರೆಗೆ ತಲುಪಿಸಿ ಪ್ರಥಮ ಚಿಕಿತ್ಸೆ ನೀಡಿದರು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ಕರೆದ್ಯೊಯಲಾಯಿತು.
ಬಣಕಲ್ ಠಾಣೆ ಎಎಸ್‍ಐ ಶಶಿ, ಸಿಬ್ಬಂದಿ ರುದ್ರೇಶ್, ಯೋಗೀಶ್ ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಣಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





