ಎಂಐಟಿಯ ನಿರ್ದೇಶಕರಾಗಿ ಡಾ.ಶ್ರೀಕಾಂತ ರಾವ್

ಮಣಿಪಾಲ, ಡಿ.30: ಮಣಿಪಾಲ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ನೂತನ ನಿರ್ದೇಶಕರಾಗಿ ಡಾ.ಶ್ರೀಕಾಂತ ರಾವ್ ಡಿ. ಅವರನ್ನು ನೇಮಿಸಲಾಗಿದೆ. ಅವರು ಜ.1ರಂದು ಅಧಿಕಾರ ಸ್ವೀಕರಿಸಲಿದ್ದಾರೆ.
ಪ್ರಸ್ತುತ ಎಂಐಟಿ ನಿರ್ದೇಶಕರಾಗಿರುವ ಡಾ.ಗೋಪಾಲಕೃಷ್ಣ ಪ್ರಭು ಅವರು ಜೈಪುರದ ಮಣಿಪಾಲ ವಿವಿಯ (ಎಂಯುಜೆ) ಅಧ್ಯಕ್ಷರಾಗಿ ನೇಮಕಗೊಂಡಿದ್ದು ಅವರು ಫೆ.13ರಂದು ಅಧಿಕಾರ ಸ್ವೀಕರಿಸದ್ದಾರೆ. ಎಂಯುಜೆಯ ಈಗಿನ ಅಧ್ಯಕ್ಷ ಡಾ.ಸಂದೀಪ್ ಸಂಚೇತಿ ಅವರ ಅಧಿಕಾರಾವಧಿ ಫೆ.12ರಂದು ಮುಕ್ತಾಯಗೊಳ್ಳಲಿದೆ.
ಡಾ.ಶ್ರೀಕಾಂತ ರಾವ್ ಅವರು ಪ್ರಸ್ತುತ ಮಾಹೆಯ ನಿರ್ದೇಶಕ (ಪ್ರವೇಶಾತಿ) ರಾಗಿದ್ದಾರೆ. ಅವರು ಎಂಐಟಿಯ ಮೆಕ್ಯಾನಿಕಲ್ ಎಂಡ್ ಮ್ಯಾನ್ಯುಫಾಕ್ಚರಿಂಗ್ ವಿಭಾಗದ ಪ್ರಾಧ್ಯಾಪಕರೂ ಆಗಿದ್ದಾರೆ. ಮೈಸೂರು ವಿವಿಯಿಂದ ಬಿಇ ಪದವಿ ಪಡೆದಿರುವ ಡಾ.ರಾವ್, ಮಣಿಪಾಲದ ಮಾಹೆಯಿಂದ ಎಂಟೆಕ್ ಹಾಗೂ ಪಿಎಚ್‌ಡಿ ಪದವಿ ಪಡೆದಿದ್ದಾರೆ.
ಎಂಐಟಿ ಇ ಎಂಡ್ ಇ ವಿಭಾಗದ ಪ್ರಾಧ್ಯಾಪಕರಾಗಿರುವ ಡಾ.ಪಿ.ಗಿರಿಧರ ಕಿಣಿ ಅವರನ್ನು ಜ.1ರಿಂದ ಅನ್ವಯಿಸುವಂತೆ ಮಾಹೆ ವಿವಿಯ ಪ್ರವೇಶಾತಿ ನಿರ್ದೇಶಕರಾಗಿ ನೇಮಿಸಲಾಗಿದೆ. ಅವರು ಎಂಐಟಿಯ ಅಸೋಸಿಯೇಟ್ ನಿರ್ದೇಶಕರಾಗಿ ಮುಂದುವರಿಯಲಿದ್ದಾರೆ.





