ಕುಂದಾಪುರ: ಧ್ವನಿವರ್ಧಕ ಬಳಕೆ ವಿರುದ್ಧ ಕ್ರಮಕ್ಕೆ ಡಿವೈಎಫ್‌ಐ ಮನವಿ

ಕುಂದಾಪುರ, ಡಿ.30: ವಡೇರಹೋಬಳಿಯ ಬಿ.ಸಿ.ರಸ್ತೆಯಲ್ಲಿರುವ ಕಂಟ್ರಿ ಕ್ಲಬ್‌ನಲ್ಲಿ ತಡರಾತ್ರಿಯವರಿಗೆ ಧ್ವನಿವರ್ಧಕ ಬಳಸಿ ಪರಿಸರದ ನಿವಾಸಿಗಳಿಗೆ ತೊಂದರೆ ಉಂಟು ಮಾಡುತ್ತಿದ್ದು, ಆದುದರಿಂದ ಇಲ್ಲಿ ಹೊಸವರ್ಷ ಆಚರಣೆ ಅವಕಾಶ ನೀಡಬಾರದೆಂದು ಆಗ್ರಹಿಸಿ ಡಿವೈಎಫ್‌ಐ ವಡೇರಹೋಬಳಿ ಘಟಕ ಶನಿವಾರ ಕುಂದಾಪುರ ಸಹಾಯಕ ಕಮಿಷನರ್ ಅವರಿಗೆ ಮನವಿ ಸಲ್ಲಿಸಿತು.
ಕಂಟ್ರಿಕ್ಲಬ್‌ನಲ್ಲಿ ಪ್ರತಿವರ್ಷವೂ ಹೊಸ ವರ್ಷ ಆಚರಣೆ ನಡೆಯುತ್ತಿದ್ದು, ಇದರಿಂದ ಆ ಪರಿಸರದಲ್ಲಿ ವಾಸವಾಗಿರುವ ಹಲವು ಕುಟುಂಬಗಳಿಗೆ ತೊಂದರೆ ಯಾಗುತ್ತಿದೆ. ತಡರಾತ್ರಿಯವರೆಗೆ ಧ್ವನಿವರ್ಧಕಗಳನ್ನು ಬಳಸಿ ಪರಿಸರದ ಜನರ ನೆಮ್ಮದಿಗೆ ಭಂಗ ಉಂಟು ಮಾಡಲಾಗುತ್ತಿದೆ. ಕಾರ್ಯಕ್ರಮದಲ್ಲಿ ಬಳಸಿದ ತ್ಯಾಜ್ಯವನ್ನು ನದಿ ನೀರಿಗೆ ಎಸೆಯಲಾಗುತ್ತಿದೆ. ಆದುದರಿಂದ ಇಲ್ಲಿ ಹೊಸ ವರ್ಷ ಆಚರಣೆಗೆ ಅವಕಾಶ ನೀಡಬಾರದು ಎಂದು ಡಿವೈಎಫ್‌ಐ ಮನವಿಯಲ್ಲಿ ಒತ್ತಾಯಿಸಿದೆ.
ಈ ಸಂದರ್ಭದಲ್ಲಿ ಘಟಕ ಅದ್ಯಕ್ಷ ಮಂಜುನಾಥ ಶೋಗನ್, ಕಾರ್ಯದರ್ಶಿ ರವಿ ವಿ.ಎಂ., ಉಪಾದ್ಯಕ್ಷರಾದ ಸುರೇಶ್ ಕಲ್ಲಾಗರ, ಶೇಖರ ಡಿ., ಸಂತೋಷ ಕಲ್ಲಾಗರ ಮೊದಲಾದವರು ಉಪಸ್ಥಿತರಿದ್ದರು.





