ಅಪ್ರೆಂಟೀಸ್ ತರಬೇತಿಗೆ ಅರ್ಜಿ ಆಹ್ವಾನ
ಉಡುಪಿ, ಡಿ.30: ಹಿಂದೂಸ್ಥಾನ್ ಎರೋನಾಟಿಕ್ಸ್ ಲಿಮಿಟೆಡ್, ಟೆಕ್ನಿಕಲ್ ಟ್ರೈನಿಂಗ್ ಇನ್‌ಸ್ಟಿಟ್ಯೂಟ್ ಬೆಂಗಳೂರು ಇವರು ಐಟಿಐ ತೇರ್ಗಡೆ ಹೊಂದಿದ ಅಭ್ಯರ್ಥಿಗಳಿಗೆ 2017-18ರ ಅಪ್ರೆಂಟೀಸ್ ತರಬೇತಿಗಾಗಿ ಅರ್ಜಿಗಳನ್ನು ಆಹ್ವಾನಿಸಿದೆ.
ಅರ್ಜಿ ಸಲ್ಲಿಸಲು ಜ.16 ಕೊನೆಯ ದಿನವಾಗಿದೆ. ಅಪ್ರೆಂಟೀಸ್ ತರಬೇತಿ ಗಾಗಿ ಪಿಟ್ಟರ್, ಟರ್ನರ್, ಮೆಶಿನಿಸ್ಟ್, ಎಲೆಕ್ಟ್ರೀಷಿಯನ್, ಕೋಪಾಫಾರ್ ಪಾಸ, ಕಾರ್ಪೆಂಟರ್, ಪೌಂಡ್ರಿಮ್ಯಾನ್, ಸೀಟ್ ಮೆಟಲ್ ವರ್ಕ್‌ರ್ ಐಟಿಐ ತರಬೇತಿ ಉತ್ತೀರ್ಣ ಅ್ಯರ್ಥಿಗಳು, ಉದ್ಯೋಗ ವಿನಿಮಯ ಕಚೇರಿ ಯಲ್ಲಿ ದೊರೆಯುವ ಅರ್ಜಿ ನಮೂನೆಯನ್ನು ಪಡೆದು ವಿವರಗಳನ್ನು ಭರ್ತಿ ಮಾಡಿ ಅರ್ಜಿಯೊಂದಿಗೆ ತಮ್ಮ ವಿದ್ಯಾರ್ಹತೆಯ ಜೆರಾಕ್ಸ್ ಪ್ರತಿಗಳು, ಪಾಸ್ ಪೋರ್ಟ್ ಅಳತೆಯುಳ್ಳ ಇತ್ತೀಚಿನ ಭಾವಚಿತ್ರ, ಉದ್ಯೋಗ ವಿನಿಮಯ ಕಛೇರಿಯಿಂದ ನೀಡಲ್ಪಟ್ಟ ಎಂಪ್ಲ್ಾಮೆಂಟ್ ಕಾರ್ಡಿನ ಜೆರಾಕ್ಸ್ ಪ್ರತಿ ನೀಡಬೇಕು.
ಅರ್ಜಿ ನಮೂನೆ ಮತ್ತು ಹೆಚ್ಚಿನ ಮಾಹಿತಿಗಾಗಿ ಉದ್ಯೋಗಾಧಿಕಾರಿ, ಜಿಲ್ಲಾ ಉದ್ಯೋಗ ವಿನಿಮಯ ಕಛೇರಿ, ಉಡುಪಿ ಅಥವಾ ದೂರವಾಣಿ ಸಂಖ್ಯೆ- 0820-2574869ನ್ನು ಸಂಪರ್ಕಿಸಬಹುದೆಂದು ಉದ್ಯೋಗಾಧಿಕಾರಿ ಪ್ರಕಟಣೆ ತಿಳಿಸಿದೆ.





