ಮಲ್ಪೆ ಬೀಚ್‌ನಲ್ಲಿ ರಾಷ್ಟ್ರೀಯ ಜೂನಿಯರ್ ಮುಕ್ತ ಈಜು ಸ್ಪರ್ಧೆ

ಮಲ್ಪೆ, ಡಿ.30: ಉಡುಪಿ ಪರ್ಬ ಮತ್ತು ಅಡ್ವೆಂಚರ್ ಫೆಸ್ಟಿವಲ್ ಪ್ರಯುಕ್ತ ಮಲ್ಪೆ ಬೀಚ್‌ನಲ್ಲಿ ಶನಿವಾವರ ಏರ್ಪಡಿಸಲಾದ ಪ್ರಥಮ ರಾಷ್ಟ್ರೀಯ ಜೂನಿ ಯರ್ ಮುಕ್ತ ಈಜು ಸ್ಪರ್ಧೆಗೆ ರಾಜ್ಯ ಮೀನುಗಾರಿಕೆ, ಯುವ ಸಬಲೀಕರಣ ಮತ್ತು ಕ್ರೀಡೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಸ್ವಿಮ್ಮಿಂಗ್ ಅಸೋಸಿಯೇಶನ್ ಅಧ್ಯಕ್ಷ ಗೋಪಾಲ್ ಹೊಸೂರು, ಕಾರ್ಯದರ್ಶಿ ಸತೀಶ್, ಕೋಶಾಧಿಕಾರಿ ಸಿಂಧ್ಯಾ, ಕ್ರೀಡಾ ಮತ್ತು ಯುವಸಬಲೀಕರಣ ಇಲಾಖೆಯ ಯುಜನ ಸಬಲೀಕರಣ, ಕ್ರೀಡಾ ಇಲಾಖೆ ಉಪನಿರ್ದೇಶಕ ಜಿತೇಂದ್ರ ಶೆಟ್ಟಿ, ಸಹಾಯಕ ನಿರ್ದೇಶಕ ರೋಶನ್ ಕುಮಾರ್ ಶೆಟ್ಟಿ, ಜನರಲ್ ತಿಮ್ಮಯ್ಯ ಸಹಾಸ ಕ್ರೀಡೆ ಆಕಾಡೆಮಿ ಕೇಂದ್ರ ಕೀರ್ತಿ ಪಯಾಸ್ ಮೊದಲಾದವರು ಉಪಸ್ಥಿತರಿದ್ದರು.
ಸ್ಪರ್ಧೆಯಲ್ಲಿ ಒಟ್ಟು 277 ಸ್ಫರ್ದಾಳುಗಳು ಭಾಗವಹಿಸಿದ್ದರು. ಈಜು ಸ್ಪರ್ಧೆಯ ಫಲಿತಾಂಶದ ವಿವರ ಇಂತಿದೆ
19 ವರ್ಷ ಕೆಳಗಿನ ಬಾಲಕಿಯರು (10ಕಿ.ಮೀ. ದೂರ): ಪ್ರ- ಸುಶ್ರುತ್ ಕಪ್ಸೆ(ಮಹಾರಾಷ್ಟ್ರ), ದ್ವಿ- ಎಸ್.ಶಿವ(ಕರ್ನಾಟಕ), ತೃ- ಓಂಕಾರ್(ಕರ್ನಾಟಕ). ಬಾಲಕಿ ಯರ ವಿಭಾಗ: ಪ್ರ-ನಿಖಿತಾ ವೇಣುಗೋಪಾಲ್(ಕರ್ನಾಟಕ), ದ್ವಿ- ರುತುಜಾ (ಮಹಾರಾಷ್ಟ್ರ), ತೃ-ಧ್ರುತಿ ಮುರಳೀಧರ್(ಕರ್ನಾಟಕ).
17 ವರ್ಷ ಕೆಳಗಿನ ಬಾಲಕರು (7.5ಕಿ.ಮೀ.): ಪ್ರ-ವಿಕ್ರಂ ಗೌಡ(ಕರ್ನಾಟಕ), ದ್ವಿ- ಶ್ರಮಿತ್ (ಕರ್ನಾಟಕ), ತೃ-ಸಂಪಣ್ಣ ಶೆಲರ್(ಮಹಾರಾಷ್ಟ್ರ). ಬಾಲಕಿ ಯರು: ಪ್ರ-ನಂದಿನಿ(ಕರ್ನಾಟಕ), ದ್ವಿ- ಅಭಿಗ್ನ ಆನಂದ್(ಕರ್ನಾಟಕ), ತೃ- ರುಗ್ವೇದ ರವೀಂದ್ರ(ಮಹಾರಾಷ್ಟ್ರ).
15 ವರ್ಷ ಕೆಳಗಿನ ಬಾಲಕರು(5ಕಿ.ಮೀ.): ಪ್ರ-ಮಂದರ್ ಮಾರುತಿ (ಕರ್ನಾಟಕ), ದ್ವಿ-ಶಾನೆ ಲಿಯೋನಲ್(ಕರ್ನಾಟಕ), ದೀಪ್ ವೆಂಕಟೇಶ್ (ಕರ್ನಾಟಕ). ಬಾಲಕಿಯರು: ಪ್ರ- ಕ್ಷಿತಿಜ(ಕರ್ನಾಟಕ), ದ್ವಿ- ಅನನ್ಯ ಪಾಂಡೆ (ಮಹಾರಾಷ್ಟ್ರ), ತೃ- ಅಂಕಿತಾ ಕಾವ್ಯ ಗೌಡ(ಕರ್ನಾಟಕ).
ಪುರುಷರ ಮುಕ್ತ ವಿಭಾಗ(ಒಂದು ಕಿ.ಮೀ. ದೂರ): ಪ್ರ- ಸವ ವೆಂಕಟೇಶ್ (ಪುದುಚೇರಿ), ದ್ವಿ- ಶಿಶಿರ್ ಘಟ್ಟಿ(ಕರ್ನಾಟಕ), ತೃ- ಮಂಜುನಾಥ (ಕರ್ನಾಟಕ).
ಮಹಿಳೆಯರು: ಪ್ರ- ಸ್ಪೂರ್ತಿ ರಾವ್, ದ್ವಿ- ವಿಂದ್ಯಾ ಭಂಡೇ, ತೃ-ರಿಥಿಕಾ ಬಿ.ಎಂ. 2.5.ಕಿ.ಮೀ. ಪುರುಷರ ವಿಭಾಗ: ಪ್ರ- ಪ್ರಣವ್ ಭಾರತಿ (ಕರ್ನಾಟಕ), ದ್ವಿ- ಆಕಾಂಕ್ಷನ್(ಕರ್ನಾಟಕ), ತೃ- ವಿಶ್ವನಾಥನ್ ಎಸ್. (ಕರ್ನಾಟಕ). ಮಹಿಳೆಯರು: ಪ್ರ- ಅಭಿಜ್ಞ ರಾಣಿ(ಕರ್ನಾಟಕ), ದ್ವಿ- ಲಕ್ಷ್ಮೀ ಪಲೆಪು(ಪುದುಚೇರಿ)







