ಪ್ರತಿಭಟನೆಗಳಿಗೆ ಟ್ರಂಪ್ ಬೆಂಬಲ: ಇರಾನ್ ಖಂಡನೆ

ಟೆಹರಾನ್,ಡಿ.30: ದೇಶದಲ್ಲಿ ನಡೆಯುತ್ತಿರುವ ಸರಕಾರಿ ವಿರೋಧಿ ಪ್ರತಿಭಟನೆಗಳಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡುತ್ತಿರುವ ಬೆಂಬಲವು ‘‘ವಂಚನೆಯಿಂದ ಕೂಡಿದ್ದಾಗಿದೆ ಹಾಗೂ ಅವಕಾಶವಾದಿತನವಾಗಿದೆ’’ಎಂದು ಇರಾನ್ ಸರಕಾರ ಆಪಾದಿಸಿದೆ.
ದೇಶದಲ್ಲಿ ನಡೆಯುತ್ತಿರುವ ಪ್ರತಿಭಟನೆಗಳ ಕುರಿತು ಅಮೆರಿಕದ ಅಧಿಕಾರಿಗಳು ಹಾಗೂ ಡೊನಾಲ್ಡ್ ಟ್ರಂಪ್ ನೀಡಿರುವ ಅವಕಾಶವಾದಿತನದ ಹೇಳಿಕೆಗಳಿಗೆ ಯಾವುದೇ ಬೆಲೆಯಿದೆಯೆಂದು ಇರಾನ್ ಪ್ರಜೆಗಳು ಭಾವಿಸುತ್ತಿಲ್ಲ ಎಂದು ಇರಾನಿನ ವಿದೇಶಾಂಗ ಇಲಾಖೆಯ ವಕ್ತಾರ ಬಹ್ರಾಮ್ ಘಸೆಮಿ ತಿಳಿಸಿದ್ದಾರೆ.
‘‘ತಮಗೆ ಅಮೆರಿಕ ಪ್ರವೇಶ ನಿಷೇಧಿಸಿರುವ ಹಾಗೂ ಆಧಾರರಹಿತವಾದ ಸಾಕ್ಷಗಳನ್ನು ಮುಂದಿಟ್ಟುಕೊಂಡು ಹಲವಾರು ಇರಾನಿಯನ್ ನಾಗರಿಕರನ್ನು ಬಂಧಿಸಿರುವ ಟ್ರಂಪ್ ಸರಕಾರದ ಕ್ರಮಗಳನ್ನು ಇರಾನಿಯನ್ನರು ಜ್ಞಾಪಕದಲ್ಲಿಟ್ಟುಕೊಂಡಿದ್ದಾರೆ’’ ಎಂದು ಅವರು ಹೇಳಿದ್ದಾರೆ.
Next Story





