ಯೆನೆಪೊಯದಲ್ಲಿ ರೋಗಿಯ ಮೂಳೆ ಮಜ್ಜೆ ಶಸ್ತ್ರ ಚಿಕಿತ್ಸೆ
ಮಂಗಳೂರು, ಡಿ.30: ಮಂಗಳೂರು ನಗರದಲ್ಲಿ ಮೊಟ್ಟ ಮೊದಲ ಬಾರಿ ಕ್ಯಾನ್ಸರ್ ರೋಗಿಯ ಮೂಳೆ ಮಜ್ಜೆಯ ಕಸಿಯನ್ನು ದೇರಳಕಟ್ಟೆ ಯೆನೆಪೊಯ ಮೆಡಿಕಲ್ ಕಾಲೇಜಿನ ಸಹ ಪ್ರಾಧ್ಯಾಪಕ ಕ್ಯಾನ್ಸರ್ ತಜ್ಞ ಡಾ. ಗುರುಪ್ರಸಾದ್ ಭಟ್ ರವರ ನೇತ್ರತ್ವದಲ್ಲಿ ಯಶಸ್ವಿಯಾಗಿ ನಡೆಸಲಾಗಿದೆ.
ಯೆನೆಪೊಯ ಮೆಡಿಕಲ್ ಕಾಲೇಜಿನಲ್ಲಿ ಚಿಕಿತ್ಸೆಗಾಗಿ ದಾಖಲಾದ 40 ವರ್ಷ ವಯಸ್ಸಿನ ವ್ಯಕ್ತಿಯನ್ನು ಕಿಮೋತೆರಪಿಗೆ ಒಳಪಡಿಸಿ, ನಂತರದ ದಿನಗಳಲ್ಲಿ ಕ್ಯಾನ್ಸರ್ ರೋಗಿಯ ಮೂಳೆಯ ಕಾಂಡಕೋಶಗಳನ್ನು ಸಂಗ್ರಹಿಸಲಾಯಿತು. ಸಂಗ್ರಹಿಸಿದ ಕಾಂಡಕೋಶಗಳನ್ನು ಮೂಳೆ ಕ್ಯಾನ್ಸರ್ ನಿಂದ ಬಳಲುತ್ತಿದ್ದ ರೋಗಿಗೆ ವರ್ಗಾವಣೆ ಮಾಡಲಾಯಿತು. ನಂತರದ 15 ದಿನಗಳಲ್ಲಿ ಆ ರೋಗಿಯನ್ನು ತೀವ್ರ ನಿಗಾ ಘಟಕದಲ್ಲಿ ಇರಿಸಿ ವೈದ್ಯಕೀಯ ತಪಾಸಣೆ ನಡೆಸಲಾಯಿತು.
ಪ್ರಸ್ತುತ ರೋಗಿಯು ಚೇತರಿಸಿಕೊಂಡಿದ್ದು, ಮಂಗಳೂರಿನ ಯೆನೆಪೊಯ ಮೆಡಿಕಲ್ ಕಾಲೇಜಿನಲ್ಲಿ ಪ್ರಪ್ರಥಮ ಬಾರಿಗೆ ಡಾ. ಗುರುಪ್ರಸಾದ್ ಭಟ್, ಸಹ ಪ್ರಾಧ್ಯಾಪಕ ಕ್ಯಾನ್ಸರ್ ತಜ್ಞ ರವರು ನಡೆಸಿದ ಮೂಳೆ ಮಜ್ಜೆಯ ಕಸಿ ಚಿಕಿತ್ಸೆ ನಡೆಸಲಾಗಿದೆ ಎಂದು ಪ್ರಕಟನೆ ತಿಳಿಸಿದೆ.





