ಪಶ್ಚಿಮಬಂಗಾಳ: ತೃಣಮೂಲ ಕಾಂಗ್ರೆಸ್ನಿಂದ ಶಾಂತಿ ರ್ಯಾಲಿ

ಸಾಂದರ್ಭಿಕ ಚಿತ್ರ
ಕೋಲ್ಕತಾ, ಡಿ. 30: ಹೊರಗಿನವರು ಗ್ರಾಮ ಬಿಟ್ಟು ತೊಲಗುವಂತೆ ಹಾಗೂ ಸಮಗ್ರ ಅಭಿವೃದ್ಧಿ ಪ್ರತಿಪಾದಿಸಿ ತೃಣಮೂಲ ಕಾಂಗ್ರೆಸ್ ಶನಿವಾರ ಪಶ್ಚಿಮಬಂಗಾಳದ ಭಂಗರ್ನಲ್ಲಿ ಶಾಂತಿ ರ್ಯಾಲಿ ನಡೆಸಿತು.
ಪವರ್ ಗ್ರಿಡ್ ಯೋಜನೆಯ ಪ್ರತಿಭಟನಾಕಾರರು ಹಾಗೂ ತೃಣಮೂಲ ಕಾಂಗ್ರೆಸ್ನ ಹೋರಾಟಗಾರರ ನಡುವೆ ಗುರುವಾರ ನಡೆದ ಘರ್ಷಣೆಯಲ್ಲಿ ಹಲವರು ಗಾಯಗೊಂಡು, ವಾಹನಗಳು ಬೆಂಕಿಗಾಹುತಿಯಾದ ಎರಡು ದಿನಗಳ ಬಳಿಕ ಈ ಬೆಳವಣಿಗೆ ನಡೆದಿದೆ.
ಘರ್ಷಣೆ ಬಗ್ಗೆ ಮಾತನಾಡಿರುವ ತೃಣಮೂಲ ಕಾಂಗ್ರೆಸ್ ನಾಯಕ ಕೈಝರ್ ಅಹ್ಮದ್, ಹೊರಗಿನವರು ಕೂಡಲೇ ಭಂಗರ್ ತ್ಯಜಿಸಿ. ಸ್ಥಳೀಯ ವಿವಾದಗಳನ್ನು ನಾವೇ ಬಗೆಹರಿಸಿಕೊಳ್ಳುತ್ತೇವೆ ಎಂದಿದ್ದಾರೆ.
ಭಂಗಾರ್ನ ಗ್ರಾಮಗಳ ಎರಡು ಗುಂಪಿನ ನಡುವೆ ಹೊರಗಿನವರು ಉದ್ವಿಗ್ನತೆ ಸೃಷ್ಟಿಸುತ್ತಿದ್ದಾರೆ. ಇಂದಿನ ರ್ಯಾಲಿಯ ಮೂಲಕ ನಾವು ಸಂದೇಶ ರವಾನಿಸಲು ಬಯಸುತ್ತೇವೆ. ಹೊರಗಿನವರು ಕೂಡಲೇ ಗ್ರಾಮ ಬಿಟ್ಟು ತೊಲಗಲಿ. ವಿವಾದವನ್ನು ಸ್ಥಳೀಯವಾಗಿ ಪರಿಹರಿಸಲು ಗ್ರಾಮಸ್ಥರು ಸಮರ್ಥರು ಎಂದು ಅವರು ಹೇಳಿದ್ದಾರೆ.
Next Story





